Article of the Month March 2020

                                     ಗಾಯತ್ರಿ

                                   1-4-1994

     ಈಗ ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಕುರಿತು ಚರ್ಚಿಸೋಣ, ಮೊದಲು ಈ ಮೂರು ವೇದಗಳೇ ಇದ್ದವು. ಅದಕ್ಕೆ ವೇದಗಳಿಗೆತ್ರಯೀಎಂಬ ಹೆಸರು ಬಂದಿರುವುದು. ಅಲ್ಲದೆ ಗಾಯತ್ರೀ ಮಂತ್ರ ಸಂಬಂಧವಾಗಿ ಮನುಸ್ಮೃತಿಯಲ್ಲಿ ಈ ಮೂರು ವೇದಗಳ ಪ್ರಸ್ತಾವ ಮಾತ್ರ ಬಂದಿದೆ. ಋಗ್ವೇದದಿಂದ ಓಂಕಾರದಲ್ಲಿನಕಾರವೂ, ‘ಭೂಃಎಂಬ ವ್ಯಾಹೃತಿಯು, ಗಾಯತ್ರಿಯ ಮೊದಲನೇ ಪಾದವೂ ಸಾರಭೂತವಾಗಿ ಬಂದಿವೆಯೆಂದೂ, ಓಂಕಾರದಲ್ಲಿನಕಾರವೂಭುವಃಎಂಬ ವ್ಯಾಹೃತಿಯು, ಗಾಯತ್ರಿಯ ಎರಡನೇ ಪಾದವೂ ಯಜುರ್ವೇದದಿಂದ ಬಂದಿವೆಯೆಂದೂ, ಓಂಕಾರದಲ್ಲಿನಕಾರವೂಸ್ವಃಎಂಬ ವ್ಯಾಹೃತಿಯು, ಗಾಯತ್ರಿಯ ಮೂರನೇ ಪಾದವೂ ಸಾಮವೇದರಿಂದ ಬಂದಿವೆಯೆಂದೂ ಮನುಸ್ಮೃತಿ ತಿಳಿಸುತ್ತದೆ. 

       ಋಗ್ವೇದವೆಂಬ ಶಬ್ದವುಋಚಸ್ತುತೌಎಂಬ ಧಾತುವಿನಿಂದ ಬಂದಿದೆ. ಅಂದರೆ ಸ್ತೋತ್ರ ಮಾಢುವುದು ಎಂದು ಇದರ ಅರ್ಥ. ಯಜುರ್ವೇದ ಎಂಬ ಶಬ್ಧವುಯಜ ದೇವಪೂಜಾ ಸಂಗತಿಕರಣದಾನೇಷುಎಂಬ ಧಾತುವಿನಿಂದ ಬಂದಿದೆ ಎಂದರೆ ಯಜ್ಞ ಅಥವಾ ದೇವಪೂಜೆ ಮಾಡುವುದು, ಸಾಂಗತ್ಯ ಮಾಡುವುದು, ಮತ್ತು ದಾನ ಮಾಡುವುದು ಎಂಬ ಅರ್ಥಗಳು ಬರುತ್ತವೆ. ಸಾಮವೇದವೆಂಬ ಶಬ್ದವುಷೋ ಅಂತ ಕರ್ಮಣಿಎಂಬ ಧಾತುವಿನಿಂದ ಉತ್ಪನ್ನವಾಗಿದೆ.ಸ್ಯತಿ ಛಿನತ್ತಿ ಪಾಪಂಅಂದರೆ ಪಾಪವನ್ನು ಅಂತ ಮಾಡುವುದು ಎಂಬ ಅರ್ಥದಲ್ಲಿ ಸಾಮವೇದವೆಂಬ ಹೆಸರು ಬಂದಿದೆ, ಸಮತ್ವವೆಂಬ ಅರ್ಥವನ್ನೂ ಗ್ರಹಿಸಬಹುದು. ಸಮತ್ವದಿಂದಲೇ ಪಾಪ ನಾಶವಾಗುವುದು. ವಿಷಮತೆಯಲ್ಲಿಯೇ ಪಾಪ ಬರುವುದು. 

       ಜ್ಞಾನ ಪ್ರಧಾನವಾದುದು ಋಗ್ವೇದ, ಕರ್ಮ ಪ್ರಧಾನವಾದುದು ಯಜುರ್ವೇದ, ಭಕ್ತಿ ಪ್ರಧಾನವಾದುದು ಸಾಮವೇದವೆಂದು ಈ ಪತ್ರಿಕೆಯ ಸಹ ಸಂಪಾದಕರಾಗಿದ್ದ ಶ್ರೀ ಹೆಚ್.ಜೆ.ರಾಮಯ್ಯಂಗಾರ್ ಅವರು ತಮ್ಮಹಿಂದೂ ಧರ್ಮದರ್ಶನವೆಂಬ ಗ್ರಂಥದಲ್ಲಿ ಸೊಗಸಾಗಿ ವಿವರಿಸಿರುತ್ತಾರೆ. ಅಥರ್ವ ವೇದವು ವಿಜ್ಞಾನ ಪ್ರಧಾನವಾದುದು ಎಂದೂ ಬರೆದಿರುತ್ತಾರೆ. 

       ಅದಲ್ಲದೆ ಋಗ್ವೇದವನ್ನು ಪ್ರಕಟಪಡಿಸಿದ ಋಷಿಯ ಹೆಸರು ಅಗ್ನಿಯೆಂದು, ಯಜುರ್ವೇದವನ್ನು ಪ್ರಕಟಪಡಿಸಿದ ಋಷಿಗೆ ವಾಯುವೆಂದೂ ಸಾಮವೇದವನ್ನು ಪ್ರಕಟಪಡಿಸಿದ ಋಷಿಯು ಆದಿತ್ಯನೆಂದೂ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಋಗ್ವೇದದಲ್ಲಿ ಛಂದೋ ಬದ್ಧವಾದ ಮಂತ್ರಗಳೂ ಯಜುರ್ವೇದದಲ್ಲಿ ಛಂದೋ ಬದ್ಧವಲ್ಲದೆ ವಚನ ರೂಪದಲ್ಲಿರುವ ಮಂತ್ರಗಳೂ ಸಾಮವೇದದಲ್ಲಿ ಹಾಡುವ ಮಂತ್ರಗಳೂ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನುನಾನು ವೇದಗಳಲ್ಲಿ ಸಾಮವೇದವಾಗಿದ್ದೇನೆಎಂದು ಹೇಳಿರುವುದನ್ನು ಸಹ ಇಲ್ಲಿ ಗಮನಿಸಬೇಕಾಗಿದೆ. 

       ನಮಗೆ ಧರ್ಮದ ಅಥವಾ ಸತ್ಯದ ಜ್ಞಾನವು ಮೊದಲು ಉಂಟಾಗುತ್ತದೆ. ಅದನ್ನು ಭದ್ರಪಡಿಸಿಕೊಳ್ಳಲು ಸ್ತ್ರೋತ್ರ ಮಾಡುತ್ತೇವೆ. ಇದರಿಂದ ಅದರಲ್ಲಿ ಆಸಕ್ತಿ ಸ್ಥಿರವಾಗುತ್ತದೆ. ಋಗ್ವೇದವು ಈ ವಿಷಯವನ್ನು ಸೂಚಿಸುತ್ತಿದೆ. ಇದರ ಋಷಿಯ ಹೆಸರಾದಅಗ್ನಿಶಬ್ದವು ಸಹ ಇದಕ್ಕೆ ಪೋಷಕವಾಗಿದೆ. ಅಗ್ನಿಯ ವಿಷಯವಾಗಿ ಹಿಂದೆ (ನವಂಬರ್ 93ರ ಸಂಚಿಕೆಯಲ್ಲಿ) ಹೀಗೆ ಬರೆದಿರುತ್ತೆ. 

       ಹೀಗೆ ಈ ಅಗ್ನಿ ತತ್ವವು ಮಾನವರ ಸಂಕಲ್ಪ ಶಕ್ತಿಗೆ ಸಂಬಂಧಿಸಿ ವಾಕ್ ಶಕ್ತಿ, ಪ್ರೇಮಶಕ್ತಿ, ಧರ್ಮ, ಪುಣ್ಯಫಲಪ್ರಾಪ್ತಿ, ಪರೋಪಕಾರ, ಉತ್ತಮವಾದ ಆನಂದ ಇವುಗಳ ದ್ಯೂತಕವಾಗಿದೆ”. 

       ಸಂಕಲ್ಪ ಶಕ್ತಿಗೆ ಮೀರಿ ನಮ್ಮಲ್ಲಿ ಪ್ರಾಣಶಕ್ತಿ ಕೆಲಸ ಮಾಡುತ್ತಿದೆ. ಸಂಕಲ್ಪ ಶಕ್ತಿಯಿಂದ ಜ್ಞಾನವನ್ನು ಪಡೆಯುವುದನ್ನು ಅಗ್ನಿ ಸೂಚಿಸುತ್ತಿದೆ. ಋಗ್ವೇದವು ಈ ಅಂಶವನ್ನು ಸೂಚಿಸುತ್ತಿದೆ. ಇದು ಜ್ಞಾನ ಪ್ರಧಾನವಾದುದು ಆದರೆ ಕೇವಲ ಜ್ಞಾನವೇ ಸಾಕಾಗುವುದಿಲ್ಲ. ಅದು ಕರ್ಮದಲ್ಲಿ ಪರಿಣಮಿಸಿ ನಮ್ಮ ಸಂಕಲ್ಪ ಶಕ್ತಿಯನ್ನು ಮೀರಿದ ದೇವತಾ ಶಕ್ತಿಗಳ ಬೆಳವಣಿಗೆ ಮತ್ತು ಅನುಗ್ರಹದಲ್ಲಿ ಪರಿಣಮಿಸಬೇಕಾಗಿದೆ. ಇದನ್ನು ಕರ್ಮಪ್ರಧಾನವಾದ ಯಜುರ್ವೇದ ಸೂಚಿಸುತ್ತಿದೆ. ಇದರ ಋಷಿವಾಯು”. ವಾಯುಪ್ರಾಣಸೂಚಕ. ಕರ್ಮಕ್ಕೆ ಪ್ರಾಣವೇ ಆಧಾರ. ನಾನಾ ವಿಧವಾದ ಜ್ಞಾನವು ಈ ರೀತಿಯಾಗಿ ಕರ್ಮದಿಂದ ಪುಷ್ಟವಾದರೆ ಮಾತ್ರ ಸಾಲದು. ಇದು ನಾನಾತ್ವದಿಂದ ಏಕತ್ವಕ್ಕೆ ಹೋದರೆ ಮಾತ್ರವೇ ಆನಂದ ಲಭಿಸುವುದು. ಇದನ್ನು ಸಾಮವೇದ ಸೂಚಿಸುತ್ತದೆ. ನಾನಾತ್ವ ಭಾವನೆಯನ್ನು ಅಂತಮಾಡಿ ಸಮತ್ವ ಭಾವನೆಯನ್ನು ಮಾಡಿಸುವುದರ ಸಂಕೇತವಾಗಿ ಸಾಮವೇದವಿದೆ. ಇದರ ಋಷಿಯ ಹೆಸರಾದಆದಿತ್ಯಎಂಬ ಶಬ್ದವು ಈ ಭಾವನೆಗೆ ಪೋಷಕವಾಗಿದೆ.ದಿತಿಎಂದರೆ ತುಂಡು ಮಾಡುವುದು, ಭೇದಿಸುವುದು ಎಂದು ಅರ್ಥ. ಅದಿತಿ ಎಂದರೆ ಜೋಡಿಸುವುದು ಎಂದು ಅರ್ಥ. ಆದುದರಿಂದಆದಿತ್ಯನೆಂಬ ಹೆಸರು ಇಲ್ಲಿ ಯುಕ್ತವಾಗಿದೆ. ಭಕ್ತಿ ಪ್ರಧಾನವಾದ ಸಾಮವೇದವು ಈ ಐಕ್ಯವನ್ನು ತಾನೆ ಸೂಚಿಸುತ್ತಿರುವುದು

       ಗಾಯತ್ರಿಯ ಮೊದಲನೇ ಪಾದದಲ್ಲಿ ಅವ್ಯಕ್ತವಾಗಿರುವತತ್ಎಂಬ ಪರಮಾತ್ಮ ತತ್ವವು ಸವಿತೃ ಅಂದರೆ ಸೂರ್ಯನ ರೂಪದಲ್ಲಿ ಜ್ಞಾನದ ಬೆಳಕನ್ನು ನೀಡುತ್ತದೆ. ಇದರಲ್ಲಿವರೇಣಿಯಂಎಂದರೆ ಪ್ರೀತಿ ಹುಟ್ಟುತ್ತದೆ. ಆಗಲೇ ಇದರ ಸ್ತೋತ್ರ ಪ್ರಾರಂಭವಾಗುತ್ತದೆ. ಆದುದರಿಂದ ಋಗ್ವೇದಕ್ಕೂ ಗಾಯತ್ರಿಯ ಮೊದಲನೇ ಪಾದಕ್ಕೂ ಇಂದ್ರಿಯ ಗೋಚರ, ಮನೋಗೋಚರವಾದಭೂಃಎಂದರೆ ಅಸ್ತಿತ್ವದ ಸತ್ಯಕ್ಕೂ ಸಂಬಂಧ ಕಾಣಿಸುತ್ತಿದೆ. ಓಂಕಾರದಲ್ಲಿನ ಅಕಾರವು ಸಹ ಇದರ ಸಂಕೇತವೇ.

       ಗಾಯತ್ರಿಯ ಎರಡನೇ ಪಾದದಲ್ಲಿನ ಕರ್ಮರೂಪವಾದಭರ್ಗಃಎಂದರೆ ಪಚನ ಅಥವಾ ಪರಿಣಾಮ, ದೇವ ಎಂದರೆ ಆಟ, ಧೀಮಹಿ ಎಂದರೆ ಧ್ಯಾನಮಾಡಬೇಕು ಎಂಬ ಭಾವಗಳು ಕರ್ಮಪ್ರಧಾನವಾದ (ಅದರಲ್ಲಿ ಯಜ್ಞರೂಪ ಕರ್ಮಪ್ರಧಾನವಾದ) ಯಜುರ್ವೇದಕ್ಕೆ ಸಂಕೇತಗಳಾಗಿವೆ. ಮತ್ತುಭುವಃಎಂದರೆ ಭೂಮಿಯಿಂದ ಬಂದ ಪ್ರಾಣಿ ಜಗತ್ತು ಇದಕ್ಕೂ ಸಂಕೇತವಾಗಿದೆ. ಓಂಕಾರದಲ್ಲಿನ ಉಕಾರಕ್ಕೂ ಸಂಕೇತವಾಗಿದೆ. 

       ಗಾಯತ್ರಿಯ ಮೂರನೇ ಪಾದದಲ್ಲಿನ ಯಃ ಎಂದರೆತತ್ಶಬ್ದ ವಾಚ್ಯವಾದ ಅವ್ಯಕ್ತ ಪರಮಾತ್ಮನಾವನೋ ಅವನೇ ಎಂಬ ಅರ್ಥ ಬಂದು ನಮ್ಮ ಜ್ಞಾನದ ಅತ್ಯುನ್ನತ ಮತ್ತು ನಾನಾತ್ವದಿಂದ ಏಕತ್ವಕ್ಕೆ ಏರಿದ ಸ್ಥಿತಿಯನ್ನು ತಲುಪುತ್ತೇವೆ. ಇಲ್ಲಿ ಆನಂದದಿಂದ ಸಂಗೀತ ಹುಟ್ಟುತ್ತದೆ. ಆದುದರಿಂದ ಗಾನ ಪ್ರಧಾನವಾದ ಸಮತ್ವ ಪ್ರಧಾನವಾದ ಪರಮಾತ್ಮ ಸೂಚಕವಾದ ಮತ್ತು ಭಕ್ತಿ ಪ್ರಧಾನವಾದ ಸಾಮವೇದಕ್ಕೆ ಇದು ಸಂಕೇತವಾಗಿದೆ. ಅಲ್ಲದೆನಃಎಂಬ ಶಬ್ದದಲ್ಲಿ ಸೂಚಿತವಾದ ಬಹುತ್ವದಲ್ಲಿನ ಏಕತ್ವದ ಭಾವವೂ ಇದಕ್ಕೆ ಪೋಷಕವಾಗಿದೆ. ಅಲ್ಲದೆಪ್ರಚೋದಯಾತ್ಎಂಬ ಶಬ್ದದಲ್ಲಿನಮುಂದಕ್ಕೆ ಕೊಂಡೊಯ್ಯಲಿಎಂಬ ಭಾವನೆಯು ಆನಂದ ತತ್ವವನ್ನು ಸೂಚಿಸುತ್ತ ಸಾಮವೇದಕ್ಕೆ ದ್ಯೋತಕವಾಗಿದೆ. ಸ್ವಃ ಎಂದರೆ ಆನಂದವೆಂಬ ಅರ್ಥವುಳ್ಳ ಸ್ವರ್ಗಲೋಕ ಮತ್ತು ಬಾಯಿಯನ್ನು ಮುಚ್ಚಿ ದೀರ್ಘವಾಗಿ ಎಳೆಯುವ ಮಕಾರವು ಸಹ ಸಾಮವೇದ ಸೂಚಕಗಳಾಗಿವೆ.          

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)