Chapter  12

                                    Bhakti Yoga

Published by   LANKA KRISHNA MURTI FOUNDATION                                                     

(https://www.facebook.com/lankakrishnamurtifoundation/)                   

Website (https://www.krishnamurtifoundation.com/lanka/)

LKM FOUNDATION-YOUTUBE

(https://www.youtube.com/channel/UCptmyD6GditXlBWnaRNI11A)

श्रीमद्भगवद्गीता

अथ भक्तियोगो नाम द्वादशोऽध्यायः

ಅಥ ಭಕ್ತಿಯೊಗೋ ನಾಮ ದ್ವಾದಶೋಧ್ಯಾಯಃ

अर्जुन उवाच

ಅರ್ಜುನ ಉವಾಚ

एवं सततयुक्ता ये

भक्तास्त्वां पर्युपासते।

ये चाप्यक्षरमव्यक्तं 

तेषां के योगवित्तमाः॥१२.१॥  

ಏವಂ ಸತತಯುಕ್ತಾ ಯೇ

ಭಕ್ತಾಸ್ತ್ವಾಂ ಪರ್ಯುಪಾಸತೇ ।

ಯೇ ಚಾಪ್ಯಕ್ಷರಮವ್ಯಕ್ತಂ

ತೇಷಾಂ ಕೇ ಯೋಗವಿತ್ತಮಾಃ ॥ 12-1

एवं सततयुक्ता ये भक्तास्त्वां पर्युपासते।

ये चाप्यक्षरमव्यक्तं  तेषां के योगवित्तमाः॥१२.१॥  

ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ ।

ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ॥ 12-1

1.     Arjuna Said:

O Krishna,

There are some devotees

Who seek union with you

With elaborate worship;

They integrate with the Manifest Form,

With all its attributes:

The Saguna Brahma;

But some other devotees

Worship by contemplating

On the Un-manifest, the Imperishable,

The Nirguna Brahma;

Between them, whom do you consider

The best integrated with you.

ಅರ್ಜುನ ಹೇಳಿದನು: 

ಓ ಕೃಷ್ಣಾ ಯಾವ ಅನನ್ಯ ಪ್ರೇಮಿ, ಹಾಗೂ ಭಕ್ತಜನರು ನಿರಂತರವಾಗಿ ನಿನ್ನ ಭಜನೆ- ಧ್ಯಾನದಲ್ಲಿ ತೊಡಗಿದ್ದು, ಸಗುಣರೂಪೀ ಪ್ರಮೇಶ್ವರನಾದ ನಿನ್ನನ್ನು ಉಪಾಸನೆ ಮಾಡುತ್ತಾರೆ ಮತ್ತು ಬೇರೆಯವರು ಯಾರು ಕೇವಲ ಅವಿನಾಶಿ ಸಚ್ಚಿದಾನಂದನ ನಿರ್ಗುಣ ಬ್ರಹ್ಮನನ್ನೇ ಅತಿ ಶ್ರೇಷ್ಠಭಾವದಿಂದ ಭಜಿಸುತ್ತಾರೆ. ಈ ಎರಡೂ ಪ್ರಕಾರದ ಉಪಾಸಕರಲ್ಲಿ ಅತ್ಯುತ್ತಮ ಯೋಗವೇತ್ತರು ಯಾರಾಗಿರುತ್ತಾರೆ?

श्रीभगवानुवाच

ಶ್ರೀಭಗವಾನುವಾಚ ।

मय्यावेश्य मनो ये मां

 नित्ययुक्ता उपासते।

श्रद्धया परयोपेता

स्ते मे युक्ततमा मताः॥१२.२॥

ಮಯ್ಯಾವೇಶ್ಯ ಮನೋ ಯೇ ಮಾಂ

ನಿತ್ಯಯುಕ್ತಾ ಉಪಾಸತೇ ।

ಶ್ರದ್ಧಯಾ ಪರಯೋಪೇತಾಃ

ತೇ ಮೇ ಯುಕ್ತತಮಾ ಮತಾಃ ॥ 12-2

मय्यावेश्य मनो ये मां नित्ययुक्ता उपासते।

श्रद्धया परयोपेता स्ते मे युक्ततमा मताः॥१२.२॥

ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ ।

ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತತಮಾ ಮತಾಃ ॥ 12-2

2 Sri Bhagavan said:

Those who worship me

With absolute faith and complete devotion,

With their minds firmly fixed on me –

Them I consider the best among my devotees

ಭಗವಂತನಾದ ಶ್ರೀ ಕೃಷ್ಣನು ಹೇಳಿದನು

ಯಾರು ನನ್ನ ಸಾಕಾರ ರೂಪದಲ್ಲಿ ತಮ್ಮ ಮನಸ್ಸನ್ನು ನಿಲ್ಲಿಸುತ್ತಾರೋ ಮತ್ತು ಅಲೌಕಿಕವಾದ ಹೆಚ್ಚಿನ ನಿಷ್ಠೆಯಿಂದ ನನ್ನನ್ನು ಪೂಜಿಸುವುದರಲ್ಲಿ ನಿರತರಾಗುತ್ತಾರೋ ಅವರನ್ನು ನಾನು ಅತ್ಯಂತ ಪರಿಪೂರ್ಣರು ಎಂದು ಭಾವಿಸುತ್ತೇನೆ.

येत्वक्षरमनिर्देश्यम्

अव्यक्तं पर्युपासते।

सर्वत्रगमचिन्त्यं

कूटस्थमचलं धृवम्॥१२.३॥

ಯೇ ತ್ವಕ್ಷರಮನಿರ್ದೇಶ್ಯಂ

ಅವ್ಯಕ್ತಂ ಪರ್ಯುಪಾಸತೇ ।

ಸರ್ವತ್ರಗಮಚಿಂತ್ಯಂಚ

ಕೂಟಸ್ಥಮಚಲಂಧ್ರುವಮ್ ॥ 12-3

संनियम्येन्द्रियग्रामं

सर्वत्रसमबुद्धयः।

ते प्राप्नुवन्ति मामेव

सर्वभूतहिते रताः॥१२.४॥

ಸಂನಿಯಮ್ಯೇಂದ್ರಿಯಗ್ರಾಮಂ

ಸರ್ವತ್ರ ಸಮಬುದ್ಧಯಃ ।

ತೇ ಪ್ರಾಪ್ನುವಂತಿ ಮಾಮೇವ

ಸರ್ವಭೂತಹಿತೇ ರತಾಃ ॥ 12-4

येत्वक्षरमनिर्देश्यम् अव्यक्तं पर्युपासते।

सर्वत्रगमचिन्त्यं च कूटस्थमचलं धृवम्॥१२.३॥

ಯೇ ತ್ವಕ್ಷರಮನಿರ್ದೇಶ್ಯಂ ಅವ್ಯಕ್ತಂ ಪರ್ಯುಪಾಸತೇ ।

ಸರ್ವತ್ರಗಮಚಿಂತ್ಯಂಚ ಕೂಟಸ್ಥಮಚಲಂಧ್ರುವಮ್ ॥ 12-3

संनियम्येन्द्रियग्रामं सर्वत्रसमबुद्धयः।

ते प्राप्नुवन्ति मामेव सर्वभूतहिते रताः॥१२.४॥

ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ ।

ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ॥ 12-4

3,4. 

With calmness and composure

In all situations,

Bringing all the senses and the mind

Under full control,

Intent on the well being

Of each and every being,

Those who contemplate on,

And elaborately worship,

The Imperishable, the Inexpressible,

The Un-manifest, the Omnipresent,

The Imperceptible, the Immutable,

The Unchangeable and the Unwavering –

They are certain to reach me alone.

 ಅವ್ಯಕ್ತವಾದದ್ದು, ಇಂದ್ರಿಯಗಳ ಗ್ರಹಿಕೆಯನ್ನು ಮೀರಿದ್ದು, ಸರ್ವವ್ಯಾಪಿಯು, ಬದಲಾವಣೆ ಇಲ್ಲದ್ದು, ದೃಢವಾದದ್ದು ಮತ್ತು ನಿಶ್ಚಲವಾದದ್ದು- ಇದು ಪರಮ ಸತ್ಯದ ನಿರಾಕಾರ ಪರಿಕಲ್ಪನೆ- ಇದನ್ನು ಎಲ್ಲ ಇಂದ್ರಿಯಗಳನ್ನು ನಿಯಂತ್ರಿಸಿ ಎಲ್ಲ ಜೀವಿಗಳ ಹಿತವನ್ನು ಬಯಸುತ್ತ ಸಂಪೂರ್ಣವಾಗಿ ಪೂಜಿಸುವವರು ಕಡೆಗೆ ನನ್ನನ್ನೇ ಹೊಂದುತ್ತಾರೆ.

क्लेशोऽधिकतरस्तेषां

अव्यक्तासक्तचेतसाम्।

अव्यक्ता हि गतिर्दुःखं

देहवद्भिरवाप्यते॥१२.५॥

ಕ್ಲೇಶೋಽಧಿಕತರಸ್ತೇಷಾಂ

ಅವ್ಯಕ್ತಾಸಕ್ತಚೇತಸಾಮ್ ।

ಅವ್ಯಕ್ತಾ ಹಿ ಗತಿರ್ದುಃಖಂ

ದೇಹವದ್ಭಿರವಾಪ್ಯತೇ ॥ 12-5

क्लेशोऽधिकतरस्तेषां अव्यक्तासक्तचेतसाम्।

अव्यक्ता हि गतिर्दुःखं देहवद्भिरवाप्यते॥१२.५॥

ಕ್ಲೇಶೋಽಧಿಕತರಸ್ತೇಷಾಂ ಅವ್ಯಕ್ತಾಸಕ್ತಚೇತಸಾಮ್ ।

ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ॥ 12-5

5.     In the case of those devotees

Inclined to integrate with the Un-manifest,

Nirguna Brahma,

Greater is the strain in their effort

If they are much attached to their bodies.

 ಆ ಸಚ್ಚಿದಾನಂದ ಪರಮ ಪ್ರಭುವಿನ ಅವ್ಯಕ್ತವಾದ ಮತ್ತು ನಿರಾಕಾರವಾದ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ಕಷ್ಟಕರವಾದದ್ದು. ಏಕೆಂದರೆ ದೇಹಾಭಿಮಾನವಿರುವಾಗ ನಿರ್ಗುಣ ಬ್ರಹ್ಮನ ಪ್ರಾಪ್ತಿಯು ಪ್ರಯಾಸಕರವಾಗಿರುತ್ತದೆ.

ये तु सर्वाणि कर्माणि

मयि संन्यस्य मत्पराः।

अनन्येनैव योगेन 

मांध्यायन्त उपासते॥१२.६॥

ಯೇ ತು ಸರ್ವಾಣಿ ಕರ್ಮಾಣಿ

ಮಯಿ ಸಂನ್ಯಸ್ಯ ಮತ್ಪರಾಃ ।

ಅನನ್ಯೇನೈವ ಯೋಗೇನ

ಮಾಂಧ್ಯಾಯಂತ ಉಪಾಸತೇ ॥ 12-6

तेषामहं समुद्धर्ता 

मृत्युसंसारसागरात्।

भवामि चिरात्पार्थ 

मय्यावेशितचेतसाम्॥१२.७॥

ತೇಷಾಮಹಂ ಸಮುದ್ಧರ್ತಾ 

ಮೃತ್ಯುಸಂಸಾರಸಾಗರಾತ್ ।

ಭವಾಮಿ ನಚಿರಾತ್ಪಾರ್ಥ 

ಮಯ್ಯಾವೇಶಿತಚೇತಸಾಮ್ ॥ 12-7

ये तु सर्वाणि कर्माणि मयि संन्यस्य मत्पराः।

अनन्येनैव योगेन मां ध्यायन्त उपासते॥१२.६॥

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ ।

ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ ॥ 12-6

तेषामहं समुद्धर्ता मृत्युसंसारसागरात्।

भवामि चिरात्पार्थ मय्यावेशितचेतसाम्॥१२.७॥

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ ।

ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ ॥ 12-7

 6        7.

Arjuna,

Those who with full devotion

Dedicate all their works to me,

Making Me their Supreme Goal,

And meditate on me

With undivided attention,

Setting their thoughts on me,–

Soon I shall raise and liberate them

From the Ocean of Samsara,

The Cycle of Births and deaths.

 ಎಲೈ ಅರ್ಜುನಾ, ತಮ್ಮ ಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ, ನಿಶ್ಚಲವಾಗಿ ನನ್ನಲ್ಲಿ ಭಕ್ತಿ ಇಟ್ಟು, ಭಕ್ತಿ ಸೇವೆಯಲ್ಲಿ ನಿರತರಾಗಿ ಸದಾ ನನ್ನನ್ನೇ ಧ್ಯಾನಿಸುತ್ತಾ, ನನ್ನಲ್ಲೇ ಮನಸ್ಸನ್ನು ನಿಲ್ಲಿಸಿ, ನನ್ನನ್ನು ಪೂಜಿಸುವವರನ್ನು, ನಾನು ಹುಟ್ಟು ಸಾವುಗಳ ಸಂಸಾರ ಸಾಗರದಿಂದ ಶೀಘ್ರವಾಗಿ ಉದ್ಧಾರ ಮಾಡುತ್ತೇನೆ.

मय्येव मन आधत्स्व

मयि बुद्धिं निवेशय।

निवसिष्यसि मय्येव

अत ऊर्ध्वं संशयः॥१२.८॥

ಮಯ್ಯೇವ ಮನ ಆಧತ್ಸ್ವ

ಮಯಿ ಬುದ್ಧಿಂ ನಿವೇಶಯ ।

ನಿವಸಿಷ್ಯಸಿ ಮಯ್ಯೇವ

ಅತ ಊರ್ಧ್ವಂ ನ ಸಂಶಯಃ ॥ 12-8

 मय्येव मन आधत्स्व मयि बुद्धिं निवेशय।

निवसिष्यसि मय्येव अत ऊर्ध्वं संशयः॥१२.८॥

ಮಯ್ಯೇವ ಮನ ಆಧತ್ಸ್ವಮಯಿ ಬುದ್ಧಿಂ ನಿವೇಶಯ ।

ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ॥ 12-8

8.     Arjuna,

If you anchor your mind in Me,

And fix your intellect on Me,

After you leave your body,

You will reach and stay with Me alone.

No need to cast doubt on it.

 ನನ್ನಲ್ಲಿಯೇ ಮನಸ್ಸನ್ನು ನಿಲ್ಲಿಸು, ನನ್ನಲ್ಲಿಯೇ ನಿನ್ನ ಬುದ್ಧಿಯನ್ನು ಸಂಪೂರ್ಣವಾಗಿ ತೊಡಗಿಸು. ನಿನ್ನ ದೇಹ ವಿಸರ್ಜನೆಯ ನಂತರ ನೀನು ನನ್ನಲ್ಲಿಯೇ ನೆಲಸುವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.

अथ चित्तं समाधातुं

  शक्नोषि मयि स्थिरम्।

अभ्यासयोगेन ततो

मामिच्छाप्तुं धनञ्जय॥१२.९॥

 ಅಥ ಚಿತ್ತಂ ಸಮಾಧಾತುಂ

ನ ಶಕ್ನೋಷಿ ಮಯಿ ಸ್ಥಿರಮ್ ।

ಅಭ್ಯಾಸಯೋಗೇನ ತತೋ

 ಮಾಮಿಚ್ಛಾಪ್ತುಂ ಧನಂಜಯ ॥ 12-9

अथ चित्तं समाधातुं शक्नोषि मयि स्थिरम्।

अभ्यासयोगेन ततो मामिच्छाप्तुं धनञ्जय॥१२.९॥

 ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ ।

ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ ॥ 12-9

 O Arjuna,

If you are unable to concentrate

And firmly fix your mind on Me,

You may opt to reach me

With repeated spiritual practices.

 ಓ ಅರ್ಜುನಾ,ಅಚಲವಾಗಿ ನೀನು ನಿನ್ನ ಮನಸ್ಸನ್ನು ನನ್ನಲ್ಲಿ ನಿಲ್ಲಿಸಲು ಸಾಧ್ಯವಾಗದಿದ್ದರೆ, ನಿರಂತರ ಭಕ್ತಿಯೋಗದ ತತ್ವಗಳ ಅಭ್ಯಾಸದಿಂದ ನನ್ನನ್ನು ಪಡಿಯಲು ಯತ್ನಿಸು.

 अभ्यासेऽप्यसमर्थोऽसि

मत्कर्मपरमो भव।

मदर्थमपि कर्माणि

कुर्वन्सिद्धिमवाप्स्यसि॥१२.१०॥

ಅಭ್ಯಾಸೇಽಪ್ಯಸಮರ್ಥೋಽಸಿ

 ಮತ್ಕರ್ಮಪರಮೋ ಭವ ।

ಮದರ್ಥಮಪಿ ಕರ್ಮಾಣಿ

ಕುರ್ವನ್ಸಿದ್ಧಿಮವಾಪ್ಸ್ಯಸಿ ॥ 12-10

 अभ्यासेऽप्यसमर्थोऽसि मत्कर्मपरमो भव।

मदर्थमपि कर्माणि कुर्वन्सिद्धिमवाप्स्यसि॥१२.१०॥

 ಅಭ್ಯಾಸೇಽಪ್ಯಸಮರ್ಥೋಽಸಿ ಮತ್ಕರ್ಮಪರಮೋ ಭವ ।

ಮದರ್ಥಮಪಿ ಕರ್ಮಾಣಿ ಕುರ್ವನ್ಸಿದ್ಧಿಮವಾಪ್ಸ್ಯಸಿ ॥ 12-10

 10.If in these spiritual practices,

You prove inefficient,

Then engage yourself in such activities

That please Me.

It will help you to attain Me.

 ಭಕ್ತಿಯೋಗದ ನಿಯಮಗಳನ್ನು ಅಭ್ಯಾಸ ಮಾಡಲು ನಿನಗೆ ಸಾಧ್ಯವಾಗದಿದ್ದರೆ ನನಗೆ ಪ್ರಿಯವಾದ ದೈವಿಕ ಕಾರ್ಯಗಳನ್ನು ಮಾಡಲು ಪ್ರಯತ್ನಿಸು. ಏಕೆಂದರೆ ನನ್ನ ನಿಮಿತ್ತವಾಗಿ ಕರ್ಮವನ್ನು ಮಾಡುವುದರಿಂದ ನೀನು ಸಿದ್ಧಿಯನ್ನು ಪಡೆದುಕೊಳ್ಳುವೆ. 

अथैतदप्यशक्तोऽसि

कर्तुं मद्योगमाश्रितः।

सर्वकर्मफलत्यागं

ततः कुरु यतात्मवान्॥१२.११॥

 ಅಥೈತದಪ್ಯಶಕ್ತೋಽಸಿ

ಕರ್ತುಂ ಮದ್ಯೋಗಮಾಶ್ರಿತಃ ।

ಸರ್ವಕರ್ಮಫಲತ್ಯಾಗಂ

ತತಃ ಕುರು ಯತಾತ್ಮವಾನ್ ॥ 12-11

अथैतदप्यशक्तोऽसि कर्तुं मद्योगमाश्रितः।

सर्वकर्मफलत्यागं ततः कुरु यतात्मवान्॥१२.११॥

 ಅಥೈತದಪ್ಯಶಕ್ತೋಽಸಿ ಕರ್ತುಂ ಮದ್ಯೋಗಮಾಶ್ರಿತಃ ।

ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ ॥ 12-11

 11.  If that is also not possible,–

Doing activities that please me –

Then seek refuge in Me and renounce

the fruits of all your actions

And dedicate them to Me

With total self-control.

 ಒಂದು ವೇಳೆ ನನ್ನ ಪ್ರಾಪ್ತಿರೂಪೀ ಯೋಗದ ಆಶ್ರಿತನಾಗಿ ಸಾಧನೆಯನ್ನು ಮಾಡುವುದರಲ್ಲಿಯೂ ಕೂಡ ನೀನು ಅಸಮರ್ಥನಾದರೆ ನಿಗ್ರಹವಂತನಾಗಿ ನನಗೆ ಶರಣು ಬಂದು ನೀನು ಮಾಡುವ ಕರ್ಮಗಳ ಫಲವನ್ನು ನನಗೆ ಸಮರ್ಪಿಸು.

श्रेयो हि ज्ञानमभ्यासात्

ज्ञ्नानाद्ध्यानं विशिष्यते।

ध्यानात्कर्मफलत्यागः

त्यागाच्छान्तिरनन्तरम्॥१२.१२॥

 ಶ್ರೇಯೋ ಹಿ ಜ್ಞಾನಮಭ್ಯಾಸಾತ್

ಜ್ಞಾನಾದ್ಧ್ಯಾನಂ ವಿಶಿಷ್ಯತೇ ।

ಧ್ಯಾನಾತ್ಕರ್ಮಫಲತ್ಯಾಗಃ

ತ್ಯಾಗಾಚ್ಛಾಂತಿರನಂತರಮ್ ॥ 12-12

श्रेयो हि ज्ञानमभ्यासात् ज्ञ्नानाद्ध्यानं विशिष्यते।

ध्यानात्कर्मफलत्यागः त्यागाच्छान्तिरनन्तरम्॥१२.१२॥

 ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನಂ ವಿಶಿಷ್ಯತೇ ।

ಧ್ಯಾನಾತ್ಕರ್ಮಫಲತ್ಯಾಗಃ ತ್ಯಾಗಾಚ್ಛಾಂತಿರನಂತರಮ್ 12-12

 12   Knowledge is better than repeated practices;

Meditation is superior to knowledge;

Better than meditation is the renunciation

Of the fruits of actions.

 ಅಭ್ಯಾಸಕ್ಕಿಂತ ಜ್ಞಾನವು ಶ್ರೇಷ್ಠ. ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ. ಧ್ಯಾನಕ್ಕಿಂತ ಕರ್ಮಫಲತ್ಯಾಗ ಶ್ರೇಷ್ಠ. ಏಕೆಂದರೆ ಇಂತಹ ತ್ಯಾಗದಿಂದ ಅಂತ್ಯದಲ್ಲಿ ಮನಶ್ಯಾಂತಿ ದೊರಕುತ್ತದೆ.

अद्वेष्टा सर्वभूतानां

मैत्रः करुण एव च।

निर्ममो निरहङ्कारः

समदुःखसुखः क्षमी॥१२.१३॥

 ಅದ್ವೇಷ್ಟಾ ಸರ್ವಭೂತಾನಾಂ

ಮೈತ್ರಃ ಕರುಣ ಏವ ಚ ।

ನಿರ್ಮಮೋ ನಿರಹಂಕಾರಃ

ಸಮದುಃಖಸುಖಃ ಕ್ಷಮೀ ॥ 12-13

 सन्तुष्टः सततं योगी

यतात्मा दृढनिश्चयः।

मय्यर्पितमनोबुद्धिः

यॊमद्भक्तः मे प्रियः॥१२.१४॥

 ಸಂತುಷ್ಟಃ ಸತತಂ ಯೋಗೀ

ಯತಾತ್ಮಾ ದೃಢನಿಶ್ಚಯಃ ।

ಮಯ್ಯರ್ಪಿತಮನೋಬುದ್ಧಿಃ

ಯೋಮದ್ಭಕ್ತಃ ಸ ಮೇ ಪ್ರಿಯಃ ॥ 12-14

अद्वेष्टा सर्वभूतानां मैत्रः करुण एव च।

निर्ममो निरहङ्कारः समदुःखसुखः क्षमी॥१२.१३॥

 ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।

ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥ 12-13

 सन्तुष्टः सततं योगी यतात्मा दृढनिश्चयः।

मय्यर्पितमनोबुद्धिः यॊमद्भक्तः मे प्रियः॥१२.१४॥

 ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ ।

ಮಯ್ಯರ್ಪಿತಮನೋಬುದ್ಧಿಃ ಯೋಮದ್ಭಕ್ತಃ ಸ ಮೇ ಪ್ರಿಯಃ ॥ 12-14

13       and 14.

A devotee that has an attitude of non-enmity

Towards all beings;                

He who has feelings of friendliness and compassion;

He who is non-attached and non-egotistic,

Even-minded towards sorrow and joy;

He who has a forgiving nature;

He who is always in a state of contentment,

Well-integrated, self-controlled and determined;

Who has offered his mind and intellect to Me,–

Such a devotee of mine is dear to Me.

 ಯಾರು ಸರ್ವ ಭೂತಗಳಲ್ಲಿಯೂ ದ್ವೇಷ ಇಲ್ಲದವನೋ, ಎಲ್ಲ ಜೀವಿಗಳಲ್ಲೂ ಮಿತ್ರಭಾವವವುಳ್ಳವನೋ, ಕರುಣೆಯುಳ್ಳವನೋ,ಅಹಂಕಾರ ಮಮಕಾರಗಳಿಲ್ಲದವನೋ ಸುಖದುಖಃಗಳಲ್ಲಿ ಸಮಚಿತ್ತನೋ, ಸಹನೆಯುಳ್ಳವನೋ, ಕ್ಷಮಾಶೀಲನೋ, ಯಾವಾಗಲೂ ಸಂತುಷ್ಟನೋ, ಯೋಗಿಯೋ, ತನ್ನಲ್ಲಿ ಧೃಢವಾದ ನಿಶ್ಚಯವುಳ್ಳವನೋ, ತನ್ನ ಮನಸ್ಸನ್ನೂ ಬುದ್ದಿಯನ್ನೂ ನನ್ನಲ್ಲಿ ನಿಲ್ಲಿಸಿರುವನೋ ಅಂತಹ ಭಕ್ತನು ನನಗೆ ಬಹಳ ಪ್ರಿಯನಾದವನು.

यस्मान्नोद्विजते लोकः

लोकान्नोद्विजते यः।

हर्षामर्षभयोद्वेगैः

मुक्तो यः मे प्रियः॥१२.१५॥

ಯಸ್ಮಾನ್ನೋದ್ವಿಜತೇ ಲೋಕಃ

ಲೋಕಾನ್ನೋದ್ವಿಜತೇ ಚ ಯಃ ।

ಹರ್ಷಾಮರ್ಷಭಯೋದ್ವೇಗೈಃ

ಮುಕ್ತೋ ಯಃ ಸ ಚ ಮೇ ಪ್ರಿಯಃ ॥ 12-15

यस्मान्नोद्विजते लोकः लोकान्नोद्विजते यः।

हर्षामर्षभयोद्वेगैः मुक्तो यः मे प्रियः॥१२.१५॥

 ಯಸ್ಮಾನ್ನೋದ್ವಿಜತೇ ಲೋಕ ಲೋಕಾನ್ನೋದ್ವಿಜತೇ ಚ ಯಃ ।

ಹರ್ಷಾಮರ್ಷಭಯೋದ್ವೇಗೈಃ ಮುಕ್ತೋ ಯಃ ಸ ಚ ಮೇ ಪ್ರಿಯಃ ॥ 12-15

15. A devotee

That does not agitate others,

Nor gets perturbed by others;

He who is free from joy, envy, fear and unrest;

Such a one is dear to Me.

 ಯಾರಿಂದ ಜನರು ಉದ್ವೇಗವನ್ನು ಹೊಂದುವುದಿಲ್ಲವೋ, ಯಾರು ಜನರಿಂದ  ಉದ್ವೇಗವನ್ನು ಹೊಂದುವುದಿಲ್ಲವೋ ಮತ್ತು ಯಾರಿಗೆ ಹರ್ಷ, ಅಸಹನೆ, ಭಯ, ಉದ್ವೇಗ ಇರುವುದಿಲ್ಲವೋ(ಅಂದರೆ ಯಾರು ಎಲ್ಲ ಕಾಲಕ್ಕೂ ಸಮಚಿತ್ತರಾಗಿರುತ್ತಾರೋ) ಅವರು ನನಗೆ ಪ್ರಿಯರು.

अनपेक्षः शुचिर्दक्षः

उदासीनो गतव्यथः।

सर्वारम्भपरित्यागी

यो मद्भक्तः मे प्रियः॥१२.१६॥

ಅನಪೇಕ್ಷಃ ಶುಚಿರ್ದಕ್ಷಃ

ಉದಾಸೀನೋ ಗತವ್ಯಥಃ ।

ಸರ್ವಾರಂಭಪರಿತ್ಯಾಗೀ

ಯೋ ಮದ್ಭಕ್ತಃ ಸ ಮೇ ಪ್ರಿಯಃ ॥ 12-16

अनपेक्षः शुचिर्दक्षः उदासीनो गतव्यथः।

सर्वारम्भपरित्यागी यो मद्भक्तः मे प्रियः॥१२.१६॥

ಅನಪೇಕ್ಷಃ ಶುಚಿರ್ದಕ್ಷಃ ಉದಾಸೀನೋ ಗತವ್ಯಥಃ ।

ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ ॥ 12-16

16. 

A devotee

Who is free from craving,

Who keeps himself pure,

Who is skilful, unprejudiced

And free from worries,

And who shuns all selfish undertakings –

Such a one is dear to Me.

 ಯಾರು ಅಪೇಕ್ಷೆಯಿಲ್ಲದವನೋ, ಪರಿಶುದ್ಧನೋ, ನಿಸ್ಪೃಹನೋ, ಚಿಂತೆಯಿಲ್ಲದವನೋ, ಪಕ್ಷಪಾತರಹಿತನೋ, ಸರ್ವಕರ್ಮಪರಿತ್ಯಾಗಿಯೋ ಅವನು ನನಗೆ ಪ್ರಿಯನಾದವನು.

यो हृष्यति द्वेष्टि

  शोचति काङ्क्षति।

शुभाशुभपरित्यागी

भक्तिमान्यः मे प्रियः॥१२.१७॥

ಯೋ ನ ಹೃಷ್ಯತಿ ನ ದ್ವೇಷ್ಟಿ

ನ ಶೋಚತಿ ನ ಕಾಂಕ್ಷತಿ ।

ಶುಭಾಶುಭಪರಿತ್ಯಾಗೀ

ಭಕ್ತಿಮಾನ್ಯಃ ಸ ಮೇ ಪ್ರಿಯಃ ॥ 12-17

यो हृष्यति द्वेष्टि न शोचति काङ्क्षति।

शुभाशुभपरित्यागी भक्तिमान्यः मे प्रियः॥१२.१७॥

ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ।

ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ ॥ 12-17

 17.

 A devotee

Who feels neither joyous nor hateful

Towards things happening or not happening,

Who neither worries nor craves,

Who keeps indifferent to the auspicious

As well as the inauspicious –

Such a one is dear to Me.

ಯಾರು ಹರ್ಷಪಡುವುದಿಲ್ಲವೋ, ದ್ವೇಷಿಸುವುದಿಲ್ಲವೋ, ಯಾರು ಶೋಕಪಡುವುದಿಲ್ಲವೋ ಮತ್ತು ಏನನ್ನೂ ಬಯಸುವುದಿಲ್ಲವೋ, ಹಾಗೂ ಯಾರು ಶುಭಾಶುಭಗಳನ್ನು ಪರಿತ್ಯಾಗ ಮಾಡುತ್ತಾರೆಯೋ ಅಂತಹ ಭಕ್ತಿಯುಕ್ತನಾದವನು ನನಗೆ ಪ್ರಿಯನಾಗಿದ್ದಾನೆ.

समः शत्रौ मित्रे

 तथा मानापमानयोः।

सीतोष्णसुखदुःखेषु

 समः सङ्गविवर्जितः॥१२.१८॥

 ಸಮಃ ಶತ್ರೌ ಚ ಮಿತ್ರೇ ಚ

ತಥಾ ಮಾನಾಪಮಾನಯೋಃ ।

ಶೀತೋಷ್ಣಸುಖದುಃಖೇಷು

ಸಮಃ ಸಂಗವಿವರ್ಜಿತಃ ॥ 12-18

 तुल्यनिन्दास्तुतिर्मौनी

 संतुष्टो येन केनचित्।

अनिकेतः स्थिरमतिः

भक्तिमान् मे प्रियो नरः॥१२.१९॥

ತುಲ್ಯನಿಂದಾಸ್ತುತಿರ್ಮೌನೀ

ಸಂತುಷ್ಟೋ ಯೇನ ಕೇನಚಿತ್ ।

ಅನಿಕೇತಃ ಸ್ಥಿರಮತಿಃ

ಭಕ್ತಿಮಾನ್ಮೇ ಪ್ರಿಯೋ ನರಃ ॥ 12-19

समः शत्रौ मित्रे  तथा मानापमानयोः।

सीतोष्णसुखदुःखेषु  समः सङ्गविवर्जितः॥१२.१८॥

 ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ ।

ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ॥ 12-18

 तुल्यनिन्दास्तुतिर्मौनी संतुष्टो येन केनचित्।

अनिकेतः स्थिरमतिः भक्तिमान् मे प्रियो नरः॥१२.१९॥

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ ।

ಅನಿಕೇತಃ ಸ್ಥಿರಮತಿಃ ಭಕ್ತಿಮಾನ್ಮೇ ಪ್ರಿಯೋ ನರಃ ॥ 12-19

18. and 19.

 A devotee

Who maintains the same attitude

Towards the dualities

Like enemies and friends,

Honour and dishonor

And heat and cold;

And with a detached outlook,

Equally poised towards contempt and praise;

Who keeps silent,          

Feels content with whatever comes;

Who does not stick to a particular place;

And who is firm and unwavering in his mind –

Such a one is dear to Me.

 ಶತ್ರು ಮಿತ್ರರಲ್ಲಿ ಸಮಬುದ್ಧಿಯುಳ್ಳವನೂ, ಮಾನಾಪಮಾನಗಳಲ್ಲಿಯೂ, ಶೀತೋಷ್ಣಗಳಲ್ಲಿಯೂ ಸುಖದುಖಃಗಳಲ್ಲಿಯೂ ಸಮನಾಗಿರುವವನೂ, ಆಸಕ್ತಿಯಿಲ್ಲದವನೂ, ಸ್ತುತಿನಿಂದೆಗಳಲ್ಲಿ ಸಮಚಿತ್ತನಾಗಿರುವವನೂ, ಮೌನಿಯೂ, ಇದ್ದದ್ದರಲ್ಲಿ ತೃಪ್ತಿಪಡುವವನೂ, ವಾಸಸ್ಥಳದಲ್ಲಿ ಆಸಕ್ತಿ ಇಲ್ಲದವನೂ, ಸ್ಥಿರಬುದ್ಧಿಯುಳ್ಳವನೂ, ಭಕ್ತಿಸೇವೆಯಲ್ಲಿ ನಿರತನಾದವನೂ ನನಗೆ ಪ್ರಿಯನು.

ये तु धर्म्यामृतमिदं

यथोक्तं पर्युपासते।

श्रद्दधाना मत्परमाः

भक्तास्तेऽतीव मे प्रियाः॥१२.२०॥

 ಯೇ ತು ಧರ್ಮ್ಯಾಮೃತಮಿದಂ

 ಯಥೋಕ್ತಂ ಪರ್ಯುಪಾಸತೇ ।

ಶ್ರದ್ದಧಾನಾ ಮತ್ಪರಮಾಃ

ಭಕ್ತಾಸ್ತೇಽತೀವ ಮೇ ಪ್ರಿಯಾಃ ॥ 12-20

ये तु धर्म्यामृतमिदं यथोक्तं पर्युपासते।

श्रद्दधाना मत्परमाः भक्तास्तेऽतीव मे प्रियाः॥१२.२०॥

 ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ ।

ಶ್ರದ್ದಧಾನಾ ಮತ್ಪರಮಾಃ ಭಕ್ತಾಸ್ತೇಽತೀವ ಮೇ ಪ್ರಿಯಾಃ ॥ 12-20

20.

These principles, these dharmic virtues,

Nectar-like,

As enumerated above —

Those devotees that put them into practice

With faith and dedication –

They are the ones extremely dear to Me.

 ಯಾರು ಭಕ್ತಿ ಸೇವೆಯ ಈ ಅಮೃತಮಾರ್ಗವನ್ನು ಹಿಡಿದು ಶ್ರದ್ಧೆಯಿಂದ ನನ್ನನ್ನೇ ಪರಮ ಗುರಿಯನ್ನಾಗಿ ಮಾಡಿಕೊಳ್ಳುವರೋ ಅವರು ನನಗೆ ಬಹು ಪ್ರಿಯರು.

        ಓಂ ತತ್ಸತ್ ಇತಿ

   ಇಲ್ಲಿಗೆ ಉಪನಿಷತ್ತೂ, ಬ್ರಹ್ಮ ವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಭಕ್ತಿಯೋಗವೆಂಬ ಹೆಸರಿನ ಹನ್ನೆರಡನೆಯ ಅಧ್ಯಾಯವು ಮುಗಿದುದು.

 ऒम् तत्सदिति       ಓಂ ತತ್ಸದಿತಿ

श्रीमद्भगवद्गीतासु    ಶ್ರೀಮದ್ಭಗವದ್ಗೀತಾಸು

उपनिषत्सु           ಉಪನಿಷತ್ಸು

ब्रह्मविद्यायां        ಬ್ರಹ್ಮವಿದ್ಯಾಯಾಂ

यॊगशास्त्रे           ಯೋಗಶಾಸ್ತ್ರೇ

श्री कृष्णार्जुन संवादॆ   ಶ್ರೀಕೃಷ್ಣಾರ್ಜುನಸಂವಾದೇ

भक्तियॊगॊनाम       ಭಕ್ತಿಯೋಗೋನಾಮ

द्वादशॊध्यायः       ದ್ವಾದಶೋಽಧ್ಯಾಯಃ

ऒम् तत्सत्         ಓಂ ತತ್ಸತ್