अथ अक्षरब्रह्मयोगो नाम अष्टमोऽध्यायः
Chapter Eight:
ಎಂಟನೆಯ ಅಧ್ಯಾಯ
(ಅಷ್ಟಮೋಧ್ಯಾಯಃ)
Published by LANKA KRISHNA MURTI FOUNDATION 
(https://www.facebook.com/lankakrishnamurtifoundation/
Website (https://www.krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)

ಅಕ್ಷರಬ್ರಹ್ಮಯೋಗ
अर्जुन उवाच
किं तद्ब्रह्म किमध्यात्मं
किं कर्म पुरुषोत्तम।
अधिभूतं च किं प्रोक्तं
अधिदैवं किमुच्यते॥८.१॥
ಅರ್ಜುನ ಉವಾಚ ।
ಕಿಂ ತದ್ ಬ್ರಹ್ಮ ಕಿಮಧ್ಯಾತ್ಮಂ
ಕಿಂ ಕರ್ಮ ಪುರುಷೋತ್ತಮ ।
ಅಧಿಭೂತಂ ಚ ಕಿಂ ಪ್ರೋಕ್ತಂ
ಅಧಿದೈವಂ ಕಿಮುಚ್ಯತೇ ॥ 8-1॥
अधियज्ञ: कथं कोऽत्र
देहेऽस्मिन् मधुसूदन।
प्रयाणकाले च कथं
ज्ञेयोऽसि नियतात्मभिः॥८.२॥ 
ಅಧಿಯಜ್ಞಃ ಕಥಂ ಕೋಽತ್ರ
ದೇಹೇಽಸ್ಮಿನ್ಮಧುಸೂದನ ।
ಪ್ರಯಾಣಕಾಲೇ ಚ ಕಥಂ
ಜ್ಞೇಯೋಽಸಿ ನಿಯತಾತ್ಮಭಿಃ ॥ 8-2॥
किं तद्ब्रह्म किमध्यात्मं किं कर्म पुरुषोत्तम।
अधिभूतं च किं प्रोक्तमधिदैवं किमुच्यते॥८.१॥
ಕಿಂ ತದ್ ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।
ಅಧಿಭೂತಂ ಚ ಕಿಂ ಪ್ರೋಕ್ತಂ ಅಧಿದೈವಂ ಕಿಮುಚ್ಯತೇ ॥ 8-1॥
अधियज्ञ: कथं कोऽत्र देहेऽस्मिन् मधुसूदन।
प्रयाणकाले च कथं ज्ञेयोऽसि नियतात्मभिः॥८.२॥ 
ಅಧಿಯಜ್ಞಃ ಕಥಂ ಕೋಽತ್ರ ದೇಹೇಽಸ್ಮಿನ್ಮಧುಸೂದನ ।
ಪ್ರಯಾಣಕಾಲೇ ಚ ಕಥಂ ಜ್ಞೇಯೋಽಸಿ ನಿಯತಾತ್ಮಭಿಃ ॥ 8-2॥

Arjuna said:
1. 
Purushottama,
What is that Brahman?
What is meant by Adhyatmam, the Inner Self?
What is karma or action?
What is said to be Adhibhutam, One who manifests as perishable elements? and
What is meant by Adhidaivam, One who manifests as divinities?
ಎಂಟನೆಯ ಅಧ್ಯಾಯ 
ಅಕ್ಷರಬ್ರಹ್ಮಯೋಗ
ಅರ್ಜುನನು ಹೇಳಿದನು:- ಹೇ ಪುರುಷೋತ್ತಮಾ! ಬ್ರಹ್ಮನ್ ಎಂದರೆ ಏನು?
ಆಧ್ಯಾತ್ಮವೆಂದರೇನು? ಕರ್ಮವೆಂದರೇನು? ನಶ್ವರವಾದ ಮೂಲಭೂತವಾಗಿ ವ್ಯಕ್ತವಾಗುವ ಅಧಿಭೂತವೆಂದೂ, ದೇವತೆಯಾಗಿ ವ್ಯಕ್ತವಾಗುವ ಅಧಿದೈವವೆಂದೂ ಯಾವುದಕ್ಕೆ ಹೇಳುತ್ತಾರೆ?
2. O Krishna, the Slayer of Madhu,
Who is the Adhiyagnam, One who operates the yagnas and
How does he do that?
How are You to be known by the self-controlled Yogis
at the time of their leaving the body?
ಓ ಕೃಷ್ಣಾ! ಮಧುಸೂದನನೇ! ಯಜ್ಞಗಳನ್ನು ಆಚರಿಸುವ ಅಧಿಯಜ್ಞನು ಯಾರು? ಅವನು ಯಜ್ಞವನ್ನು ಹೇಗೆ ಆಚರಿಸುವನು? ಈ ಅಧಿಯಜ್ಞನು ದೇಹದಲ್ಲಿ ವಾಸಿಸುವುದು ಹೇಗೆ? ಮರಣಕಾಲದಲ್ಲಿ ಯೋಗಿಗಳು ನಿನ್ನನ್ನು ಹೇಗೆ ಅರಿತುಕೊಳ್ಳುತ್ತಾರೆ?

श्रीभगवानुवाच :
अक्षरं ब्रह्म परमं
स्वभावोऽध्यात्ममुच्यते।
भूतभावोद्भवकरो
विसर्गः कर्मसञ्ज्ञितः॥८.३॥
ಶ್ರೀಭಗವಾನುವಾಚ ।
ಅಕ್ಷರಂ ಬ್ರಹ್ಮ ಪರಮಂ 
ಸ್ವಭಾವೋಽಧ್ಯಾತ್ಮಮುಚ್ಯತೇ ।
ಭೂತಭಾವೋದ್ಭವಕರೋ 
ವಿಸರ್ಗಃ ಕರ್ಮಸಂಜ್ಞಿತಃ ॥ 8-3॥
अक्षरं ब्रह्म परमं स्वभावोऽध्यात्ममुच्यते।
भूतभावोद्भवकरो विसर्गः कर्मसञ्ज्ञितः॥८.३॥
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಽಧ್ಯಾತ್ಮಮುಚ್ಯತೇ ।
ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ॥ 8-3॥
3. Sri Bhagawan said:
Imperishable is the Supreme Brahman.
When He manifests Himself as the Inner Self,
In each body, He is known as Adhyatmam.
Karma or Action refers to the Act
Of bringing all beings into Existence
Or Creation.
ಶ್ರೀ ಭಗವಂತನು ಹೇಳಿದನು:- ನಾಶರಹಿತವಾದ ಶ್ರೇಷ್ಠ ತತ್ವವು ಬ್ತಹ್ಮವು. ಪ್ರತಿಯೊಂದು ದೇಹದಲ್ಲಿಯು ಅಂತರಾತ್ಮನಾಗಿ ವ್ಯಕ್ತನಾಗುವವನೇ ಆಧ್ಯಾತ್ಮನು. ಭೂತಕೋಟಿಗಳ ಸಾತ್ವಿಕಾದಿ ಭಾವಗಳನ್ನು ಉತ್ಪನ್ನಮಾಡುವ ಸೃಷ್ಟಿ ವ್ಯಾಪಾರವೇ ಕರ್ಮವೆನಿಸುತ್ತದೆ.

अधिभूतं क्षरो भावः
पुरुषश्चाधिदैवतम्।
अधियज्ञोऽहमेवात्र
देहे देहभृतां वर॥८.४॥
ಅಧಿಭೂತಂ ಕ್ಷರೋ ಭಾವಃ
ಪುರುಷಶ್ಚಾಧಿದೈವತಮ್ ।
ಅಧಿಯಜ್ಞೋಽಹಮೇವಾತ್ರ
ದೇಹೇ ದೇಹಭೃತಾಂ ವರ ॥ 8-4॥
अधिभूतं क्षरो भावः पुरुषश्चाधिदैवतम्।
अधियज्ञोऽहमेवात्र देहे देहभृतां वर॥८.४॥ 
ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ ।
ಅಧಿಯಜ್ಞೋಽಹಮೇವಾತ್ರ ದೇಹೇ ದೇಹಭೃತಾಂ ವರ ॥ 8-4॥
4. Adhibhutam refers to the Perishable Bodies
That constitute Existence.
Adhidaivatam refers to the Purusha
Who is the Head of all Divinites and
Who is known as Hiranyagarbha.
I am Adhiyagna;
As the Indwelling Self
I am related to the performance of Yagnas;
O Arjuna, the choicest among men,
As Vishnu I preside over the Yagnas.
ಅಸ್ತಿತ್ವವನ್ನು ನಿಯತಗೊಳಿಸುವ ನಶ್ವರವಾದ ವಸ್ತುಗಳೇ ಅಧಿಭೂತವು. ಅಂದರೆ ಸದಾ ಬದಲಾಗುತ್ತಿರುವ ಭೌತಿಕ ಪ್ರಕೃತಿಗೆ ಅಧಿಭೂತ ಎಂದು ಹೆಸರು. ಸೂರ್ಯ, ಚಂದ್ರರಂತಹ ದೇವತೆಗಳನ್ನು ಒಳಗೊಂಡ, ಸರ್ವಪ್ರಾಣಿಗಳ ಕರಣಗಳಿಗೂ ಅನುಗ್ರಾಹಕನಾದ ಹಿರಣ್ಯಗರ್ಭನೆಂದು ಕರೆಯಲ್ಪಡುವ ದೇವತೆಗಳ ಮುಖ್ಯಸ್ಥನೇ ಅಧಿದೈವ. ಈ ದೇಹದಲ್ಲಿ ಅಂತರ್ಯಾಮಿಯಾದ ನಾನೇ ಅಧಿಯಜ್ಞ. ಓ ಅರ್ಜುನಾ! ನರೋತ್ತಮಾ! ಯಜ್ಞಾಚರಣೆಗೆ ಸಂಬಂಧಪಟ್ಟಂತೆ ವಿಷ್ಣುವಿನ ರೂಪದಲ್ಲಿ ನಾನು ಯಜ್ಞದ ಅಧಿಪತಿಯಾಗಿದ್ದೇನೆ.
अन्तकाले च मामेव
स्मरन्मुक्त्वा कळेबरम्।
यः प्रयाति स मद्भावं
याति नास्त्यत्र संशयः॥८.५॥
ಅಂತಕಾಲೇ ಚ ಮಾಮೇವ 
ಸ್ಮರನ್ಮುಕ್ತ್ವಾ ಕಳೇವರಮ್ ।
ಯಃ ಪ್ರಯಾತಿ ಸ ಮದ್ಭಾವಂ 
ಯಾತಿ ನಾಸ್ತ್ಯತ್ರ ಸಂಶಯಃ ॥ 8-5॥
अन्तकाले च मामेव स्मरन्मुक्त्वा कळेबरम्।
यः प्रयाति स मद्भावं याति नास्त्यत्र संशयः॥८.५॥
ಅಂತಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಳೇವರಮ್ ।
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥ 8-5॥
5. At the time of leaving the body,
When facing death,
He who remembers Me
Will surely reach Me alone.
There is no doubt about it.
ಮರಣಕಾಲದಲ್ಲಿ ನನ್ನನ್ನೇ ಸ್ಮರಿಸುತ್ತಾ ಶರೀರವನ್ನು ಬಿಡುವವನು, ಖಂಡಿತವಾಗಿ ನನ್ನ ಸ್ವರೂಪವನ್ನೇ ಪಡೆದುಕೊಳ್ಳುತ್ತಾನೆ. ನನ್ನನ್ನೇ ಹೊಂದುವನು. ಇದರಲ್ಲಿ ಸಂಶಯವಿಲ್ಲ. यं यं वापि स्मरन् भावं
त्यजत्यन्ते कळेबरम्।
तं तमेवैति कौन्तेय
सदा तद्भावभावितः॥८.६॥
ಯಂ ಯಂ ವಾಪಿ ಸ್ಮರನ್ಭಾವಂ
ತ್ಯಜತ್ಯಂತೇ ಕಳೇವರಮ್ ।
ತಂ ತಮೇವೈತಿ ಕೌಂತೇಯ 
ಸದಾ ತದ್ಭಾವಭಾವಿತಃ ॥ 8-6॥
यं यं वापि स्मरन् भावं त्यजत्यन्ते कळेबरम्।
तं तमेवैति कौन्तेय सदा तद्भावभावितः॥८.६॥
ಯಂ ಯಂ ವಾಪಿ ಸ್ಮರನ್ಭಾವಂ ತ್ಯಜತ್ಯಂತೇ ಕಳೇವರಮ್ ।
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ ॥ 8-6॥
6. O Arjuna,
Whatever form of deity
One happens to remember,
At the time of leaving the body,
The very same body of that deity
He would each –
That form of the deity,
For having repeatedly remembered
All through his life time.
ಓ ಅರ್ಜುನಾ! ಶರೀರವನ್ನು ತ್ಯಜಿಸುವಾಗ ಮನುಷ್ಯನು ಯಾವ ಯಾವ ದೇವತೆಗಳನ್ನು ಸ್ಮರಿಸುವವನೋ, ಯಾವ ಭಾವವನ್ನು ಹೊಂದುವನೋ, ತನ್ನ ಜೀವಿತಾವಧಿಯಲ್ಲಿ ಪದೇ ಪದೇ ಆ ದೇವತೆಯ ಸ್ಮರಣೆ ಮಾಡಿರುವನೋ, ಆ ವಾಸನಾಬಲದಿಂದ ಸತ್ತನಂತರ ಅವನಿಗೆ ನಿಶ್ಚಯವಾಗಿಯೂ ಅದೇ ಅನುಭೂತಿಯುಂಟಾಗಿ ಅದೇ ಭಾವವನ್ನು ಹೊಂದುವನು.
तस्मात् सर्वेषु कालेषु
मामनुस्मर युध्य च।
मय्यर्पितमनोबुद्धि:
मामेवैष्यस्यसंशयम्॥८.७॥
ತಸ್ಮಾತ್ಸರ್ವೇಷು ಕಾಲೇಷು 
ಮಾಮನುಸ್ಮರ ಯುಧ್ಯ ಚ ।
ಮಯ್ಯರ್ಪಿತಮನೋಬುದ್ಧಿಃ
ಮಾಮೇವೈಷ್ಯಸ್ಯಸಂಶಯಮ್ ॥ 8-7॥
तस्मात् सर्वेषु कालेषु मामनुस्मर युध्य च।
मय्यर्पितमनोबुद्धि: मामेवैष्यस्यसंशयम्॥८.७॥
ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।
ಮಯ್ಯರ್ಪಿತಮನೋಬುದ್ಧಿಃ ಮಾಮೇವೈಷ್ಯಸ್ಯಸಂಶಯಮ್ ॥ 8-7॥

7. Therefore, Arjuna,
Remember Me at all times
And fight.
Dedicate your mind and intellect
To Me and you will reach Me alone,
Without any doubt whatsoever.
ಆದುದರಿಂದ ಅರ್ಜುನಾ! ಸದಾ ನನ್ನನ್ನೇ ನೆನೆಸುತ್ತಾ, ಅನುಸಂಧಾನ ಮಾಡುತ್ತಾ ಯುದ್ಧವನ್ನು ಮಾಡು. ನಿನ್ನ ಚಟುವಟಿಕೆಗಳನ್ನು ನನಗೆ ಅರ್ಪಿಸಿ, ನಿನ್ನ ಮನಸ್ಸು ಮತ್ತು ಬುದ್ಧಿಶಕ್ತಿಗಳು ನನ್ನಲ್ಲೇ ನೆಲಸಿದ್ದರೆ ನಿಸ್ಸಂಶಯವಾಗಿಯೂ ನೀನು ನನ್ನನ್ನೇ ಪಡೆಯುವೆ.

अभ्यासयोगयुक्तेन
चेतसा नान्यगामिना।
परमं पुरुषं दिव्यं
याति पार्थानुचिन्तयन्॥८.८॥
ಅಭ್ಯಾಸಯೋಗಯುಕ್ತೇನ 
ಚೇತಸಾ ನಾನ್ಯಗಾಮಿನಾ ।
ಪರಮಂ ಪುರುಷಂ ದಿವ್ಯಂ 
ಯಾತಿ ಪಾರ್ಥಾನುಚಿಂತಯನ್ ॥ 8-8॥
अभ्यासयोगयुक्तेन चेतसा नान्यगामिना।
परमं पुरुषं दिव्यं याति पार्थानुचिन्तयन्॥८.८॥
ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ ।
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ॥ 8-8॥
8. Arjuna,
With the mind firmly directed
With the help of repeated Yogic practice,
And without any distraction whatsoever, 
If one contemplates
The Supreme Divine Spirit,
Such a Yogi would surely succeed
In reaching Him.
ಅರ್ಜುನಾ! ಸತತ ಯೋಗಸಾಧನೆಯ ಪರಿಶ್ರಮದಿಂದ, ಯಾವುದೇ ರೀತಿಯ ಮನಸ್ಸಿನ ಚಂಚಲತೆಯಿಲ್ಲದೆ, ಯಾರು ಸ್ಥಿರವಾದ ಮನಸ್ಸಿನಿಂದ, ಏಕಾಗ್ರತೆಯಿಂದ, ಪರಮಾತ್ಮನಲ್ಲಿ ಮನಸ್ಸನ್ನು ನಿಲ್ಲಿಸುತ್ತಾರೆಯೋ, ಅಂತಹ ಯೋಗಿಯು ಖಂಡಿತವಾಗಿಯೂ ಆ ಪರಮ ಪುರುಷನನನ್ನು ಹೊಂದಲು ಯಶಸ್ವಿಯಾಗುತ್ತಾನೆ.

कविं पुराणमनुशासितारं
अणोरणीयांसमनुस्मरेद्यः।
सर्वस्य धातारमचिन्त्यरूपं
आदित्यवर्णं तमसःपरस्तात्॥८.९॥
ಕವಿಂ ಪುರಾಣಮನುಶಾಸಿತಾರಂ 
ಅಣೋರಣೀಯಾಮ್ ಸಮನುಸ್ಮರೇದ್ಯಃ ।
ಸರ್ವಸ್ಯ ಧಾತಾರಮಚಿಂತ್ಯರೂಪಂ
ಆದಿತ್ಯವರ್ಣಂ ತಮಸಃ ಪರಸ್ತಾತ್ ॥ 8-9॥
प्रयाणकाले मनसाचलेन
भक्त्या युक्तो योगबलेन चैव।
भ्रुवोर्मध्ये प्राणमावेश्य सम्यक्
स तं परं पुरुषमुपैति दिव्यम्॥८.१०॥
ಪ್ರಯಾಣಕಾಲೇ ಮನಸಾಽಚಲೇನ
ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್
ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥ 8-10॥
कविं पुराणमनुशासितारमणोरणीयांसमनुस्मरेद्यः।
सर्वस्य धातारमचिन्त्यरूपमादित्यवर्णं तमसःपरस्तात्॥८.९॥
ಕವಿಂ ಪುರಾಣಮನುಶಾಸಿತಾರಂ ಅಣೋರಣೀಯಾಮ್ ಸಮನುಸ್ಮರೇದ್ಯಃ ।
ಸರ್ವಸ್ಯ ಧಾತಾರಮಚಿಂತ್ಯರೂಪಂ ಆದಿತ್ಯವರ್ಣಂ ತಮಸಃ ಪರಸ್ತಾತ್ ॥ 8-9॥
प्रयाणकाले मनसाचलेन भक्त्या युक्तो योगबलेन चैव।
भ्रुवोर्मध्ये प्राणमावेश्य सम्यक् स तं परं पुरुषमुपैति दिव्यम्॥८.१०॥
ಪ್ರಯಾಣಕಾಲೇ ಮನಸಾಽಚಲೇನ ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥ 8-10॥
9. 
10. He, who, at the time of death,
With full devotion,
With a steady and firm mind,
Fixes, with the power of Yoga,
His vital breath completely
Between the two eye-brows
And contemplates
The All-Knowing, Ever Present One,
Who controls the entire Universe,
Who is subtler than the subtlest,
Whose Form none can understand,
Who is resplendent like the Sun,
Who stays beyond the Darkness of Ignorance —
Whoever remembers such Supreme One,
At the time of departure,
Will surely reach that Divine Presence.
ಮರಣ ಕಾಲದಲ್ಲಿ ಭಕ್ತಿಯಿಂದ ಕೂಡಿದವನಾಗಿ, ಅಚಲ ಮತ್ತು ಧೃಢಮನಸ್ಸಿನಿಂದ, ಯೋಗಶಕ್ತಿಯನ್ನು ಆಶ್ರಯಿಸಿ, ಭ್ರೂಮಧ್ಯದಲ್ಲಿ ತನ್ನ ಪ್ರಾಣವಾಯುವನ್ನು ನೆಲೆಗೊಳಿಸಿ, ಸರ್ವಜ್ಞನೂ, ಪುರಾಣಪುರುಷನೂ, ವಿಶ್ವನಿಯಾಮಕನೂ, ಅಣುವಿಗಿಂತ ಸೂಕ್ಷ್ಮಾತಿಸೂಕ್ಷ್ಮನೂ, ಸರ್ವವನ್ನು ಧರಿಸುವವನೂ, ಅಗಮ್ಯಗೋಚರನೂ, ಸೂರ್ಯನಂತೆ ಸ್ವಪ್ರಕಾಶನೂ, ಅಚಿಂತ್ಯವಾದ ರೂಪವುಳ್ಳವನೂ, ಆದಿತ್ಯವರ್ಣನೂ, ಅವಿದ್ಯಾತೀತನೂ, ತಮಸ್ಸಿನ ಆಚೆ ಇರುವವನೂ ಆದ ಪರಮಪುರುಷನನ್ನು, ಯಾರು ಸ್ಮರಿಸುತ್ತಾರೆಯೋ ಅವರು ಖಂಡಿತವಾಗಿ ಆ ದಿವ್ಯ ಪರಮಪುರುಷನನ್ನು ಸೇರುವರು.

यदक्षरं वेदविदो वदन्ति
विशन्ति यद्यतयो वीतरागाः।
यदिच्छन्तो ब्रह्मचर्यं चरन्ति
तत्ते पदं सङ्ग्रहेण प्रवक्ष्ये॥८.११॥
ಯದಕ್ಷರಂ ವೇದವಿದೋ ವದಂತಿ
ವಿಶಂತಿ ಯದ್ಯತಯೋ ವೀತರಾಗಾಃ ।
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ
ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥ 8-11॥
यदक्षरं वेदविदो वदन्ति विशन्ति यद्यतयो वीतरागाः।
यदिच्छन्तो ब्रह्मचर्यं चरन्ति तत्ते पदं सङ्ग्रहेण प्रवक्ष्ये॥८.११॥
ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ ।
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥ 8-11॥

11. Arjuna,
I shall explain to you, in brief,
That Goal which the Knowers of Vedas
Declare to be the Indestructible One;
That which the ascetics,
Free from all attachments,
Enter in order to understand ;
And that which to reach
The Seekers lead a disciplined life
Of self-continence.
ಅರ್ಜುನಾ! ವೇದವನ್ನು ಬಲ್ಲವರು ಅವಿನಾಶಿ ಎಂಬುದಾಗಿ ಯಾವುದನ್ನು ಘೋಷಿಸುತ್ತಾರೆಯೋ, ಸರ್ವಪರಿತ್ಯಾಗಿಗಳಾದ ಬಂಧಮುಕ್ತರಾದ ವೈರಾಗ್ಯಶೀಲರಾದ ಯತಿಗಳು ಅರ್ಥಮಾಡಿಕೊಳ್ಳುವುದಕ್ಕಾಗಿ ಯಾವುದನ್ನು ಪ್ರವೇಶಿಸುತ್ತಾರೆಯೋ, ವಿರಾಗಿಗಳು ಯಾವುದನ್ನು ಕೋರಿ ಬ್ರಹ್ಮಚರ್ಯವನ್ನು ಅನುಷ್ಠಾನ ಮಾಡುವರೋ ಆ ಗುರಿಯನ್ನು, ಆ ಪರಮಪದವನ್ನು ನಾನು ನಿನಗೆ ಸಂಕ್ಷೇಪವಾಗಿ ಹೇಳುವೆನು. 
सर्वद्वाराणि सम्यम्य
मनो हृदि निरुध्य च।
मूर्ध्न्याधायात्मनः प्राणं
आस्थितो योगधारणाम्॥८.१२॥
ಸರ್ವದ್ವಾರಾಣಿ ಸಂಯಮ್ಯ
ಮನೋ ಹೃದಿ ನಿರುಧ್ಯ ಚ ।
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಂ
ಆಸ್ಥಿತೋ ಯೋಗಧಾರಣಾಮ್ ॥ 8-12॥
ओमित्येकाक्षरं ब्रह्म
व्याहरन् मामनुस्मरन्।
यः प्रयाति त्यजन् देहं
स याति परमां गतिं॥८.१३॥ 
ಓಮಿತ್ಯೇಕಾಕ್ಷರಂ ಬ್ರಹ್ಮ 
ವ್ಯಾಹರನ್ಮಾಮನುಸ್ಮರನ್ ।
ಯಃ ಪ್ರಯಾತಿ ತ್ಯಜಂದೇಹಂ
ಸ ಯಾತಿ ಪರಮಾಂ ಗತಿಮ್ ॥ 8-13॥
सर्वद्वाराणि सम्यम्य मनो हृदि निरुध्य च।
मूर्ध्न्याधायात्मनः प्राणमास्थितो योगधारणाम्॥८.१२॥
ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ ।
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಂ ಆಸ್ಥಿತೋ ಯೋಗಧಾರಣಾಮ್ ॥ 8-12॥
ओमित्येकाक्षरं ब्रह्म व्याहरन् मामनुस्मरन्।
यः प्रयाति त्यजन् देहं स याति परमां गतिं॥८.१३॥ 
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ ।
ಯಃ ಪ್ರಯಾತಿ ತ್ಯಜಂದೇಹಂ ಸ ಯಾತಿ ಪರಮಾಂ ಗತಿಮ್ ॥ 8-13॥
12. 
13. Bringing the senses under control,
By closing their gate-ways in the body;
Keeping the mind confined to the heart,
And fixing the prana or the life-breath
At the crown position,
And intently remaining in a state of Yoga,
Whoever remembers Me
By uttering the syllable AUM
That represents Brahman,
And leaves the body thus,
He proceeds to the Highest State.
ದೇಹದಲ್ಲಿನ ಇಂದ್ರಿಯಗಳ ದ್ವಾರಗಳನ್ನು ಮುಚ್ಚಿ, ಸರ್ವೇಂದ್ರಿಯಗಳನ್ನು ಸಂಯಮಗೊಳಿಸಿ, ಮನಸ್ಸನ್ನು ಹೃದಯದಲ್ಲಿ ನೆಲೆಗೊಳಿಸಿ, ತನ್ನ ಪ್ರಾಣವಾಯುವನ್ನು ಶಿರಸ್ಸಿನ ಬ್ರಹ್ಮರಂದ್ರದಲ್ಲಿ ನಿಲ್ಲಿಸಿ, ಪರಮಾತ್ಮನ ಸಂಬಂಧವಾದ ಯೋಗಧಾರಣೆಯಲ್ಲಿ ಸ್ಥಿತನಾಗಿ, ಬ್ರಹ್ಮವಾಚಕವಾದ ಏಕಾಕ್ಷರರೂಪೀ ಓಂಕಾರವನ್ನು ಉಚ್ಚರಿಸುತ್ತಾ, ನನ್ನನ್ನು ಸ್ಮರಿಸುತ್ತಾ, ಯಾರು ದೇಹವನ್ನು ತ್ಯಜಿಸುತ್ತಾರೆಯೋ ಅವರು ಪರಮಗತಿಯಾದ ಮೋಕ್ಷವನ್ನು ಪಡೆಯುತ್ತಾರೆ.

अनन्यचेताः सततं
यो मां स्मरति नित्यशः।
तस्याहं सुलभः पार्थ
नित्ययुक्तस्य योगिनः॥८.१४॥
ಅನನ್ಯಚೇತಾಃ ಸತತಂ 
ಯೋ ಮಾಂ ಸ್ಮರತಿ ನಿತ್ಯಶಃ ।
ತಸ್ಯಾಹಂ ಸುಲಭಃ ಪಾರ್ಥ 
ನಿತ್ಯಯುಕ್ತಸ್ಯ ಯೋಗಿನಃ ॥ 8-14॥
अनन्यचेताः सततं यो मां स्मरति नित्यशः।
तस्याहं सुलभः पार्थ नित्ययुक्तस्य योगिनः॥८.१४॥
ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ ।
ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ ॥ 8-14॥
14. 
With undistracted mind
Whoso thinks of Me
Continuously, always,
Such a self-controlled Yogi,
Arjuna, finds easy access to Me.
ಅನನ್ಯ ಚಿತ್ತದಿಂದ ಅನವರತವೂ ನನ್ನನ್ನೇ ಸ್ಮರಿಸುವ ನಿತ್ಯಯುಕ್ತನಾದ ಯೋಗಿಗೆ, ಅರ್ಜುನಾ! ನಾನು ಸುಲಭವಾಗಿ ಪ್ರಾಪ್ತನಾಗುತ್ತೇನೆ.

मामुपेत्य पुनर्जन्म 
दुःखालयमशाश्वतम्।
नाप्नुवन्ति महात्मानः
संसिद्धिं परमां गताः॥८.१५॥
ಮಾಮುಪೇತ್ಯ ಪುನರ್ಜನ್ಮ
ದುಃಖಾಲಯಮಶಾಶ್ವತಮ್ । 
ನಾಪ್ನುವಂತಿ ಮಹಾತ್ಮಾನಃ 
ಸಂಸಿದ್ಧಿಂ ಪರಮಾಂ ಗತಾಃ ॥ 8-15॥
मामुपेत्य पुनर्जन्म दुःखालयमशाश्वतम्।
नाप्नुवन्ति महात्मानः संसिद्धिं परमां गताः॥८.१५॥
ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ । 
ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ॥ 8-15॥
15. Those Mahatmas, the Great Ones,
Who have attained
The Supreme State of Perfection
Will reach Me.
They will not undergo re-birth,
Which is the abode of suffering
And which is also ephemeral.
ಪರಮಸಿದ್ಧಿಯನ್ನು ಪಡೆದ ಮಹಾತ್ಮರು ನನ್ನನ್ನೇ ಸೇರುತ್ತಾರೆ. ದುಃಖಕೂಪವೂ, ವಿಕಾರಶೀಲವೂ, ಕ್ಷಣಭಂಗುರವೂ ಆದ ಪುನರ್ಜನ್ಮವನ್ನು ಪಡೆಯುವುದಿಲ್ಲ. ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಿದ ಆ ಮಹನೀಯರು ಮೋಕ್ಷರಾಜ್ಯಕ್ಕೆ ಅರ್ಹರು. 
आब्रह्मभुवनाल्लोकाः
पुनरावर्तिनोऽर्जुन।
मामुपेत्य तु कौन्तेय
पुनर्जन्म न विद्यते॥८.१६॥
ಆಬ್ರಹ್ಮಭುವನಾಲ್ಲೋಕಾಃ 
ಪುನರಾವರ್ತಿನೋಽರ್ಜುನ ।
ಮಾಮುಪೇತ್ಯ ತು ಕೌಂತೇಯ 
ಪುನರ್ಜನ್ಮ ನ ವಿದ್ಯತೇ ॥ 8-16॥
आब्रह्मभुवनाल्लोकाः पुनरावर्तिनोऽर्जुन।
मामुपेत्य तु कौन्तेय पुनर्जन्म न विद्यते॥८.१६॥
ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋಽರ್ಜುನ ।
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ॥ 8-16॥
16. Arjuna,
All the worlds,
Starting from this world
To that of Brahma,
They are characterised by recurrence,
That is, people move about them
From one to the other;
But for those who reach Me,
There is no re-birth.
ಅರ್ಜುನಾ! ಈ ಪ್ರಪಂಚದಿಂದ ಹಿಡಿದು, ಬ್ರಹ್ಮಲೋಕದವರೆಗಿನ ಎಲ್ಲ ಲೋಕಗಳೂ ಪುನರಾವರ್ತನೆಯಾಗುವ ಗುಣಗಳನ್ನು ಹೊಂದಿದ ದುಃಖದ ಆವಾಸಗಳಾಗಿವೆ. ಇವುಗಳಲ್ಲಿ ಜನನ ಮರಣಗಳು ಮತ್ತೆ ಮತ್ತೆ ಆಗುತ್ತವೆ. ಪುನರ್ಜನ್ಮವು ತಪ್ಪುವುದಿಲ್ಲ. ಆದರೆ ನನ್ನನ್ನು ಪಡೆದುಕೊಂಡವರು ಮಾತ್ರ ಪುನರ್ಜನ್ಮವಿಲ್ಲದವರಾಗುತ್ತಾರೆ.

सहस्रयुगपर्यन्तं
अहर्यद्ब्रह्मणो विदुः।
रात्रिं युगसहस्रान्तां
तेऽहोरात्रविदो जनाः॥८.१७॥
ಸಹಸ್ರಯುಗಪರ್ಯಂತಂ
ಅಹರ್ಯದ್ ಬ್ರಹ್ಮಣೋ ವಿದುಃ ।
ರಾತ್ರಿಂ ಯುಗಸಹಸ್ರಾಂತಾಂ
ತೇಽಹೋರಾತ್ರವಿದೋ ಜನಾಃ ॥ 8-17॥
सहस्रयुगपर्यन्तमहर्यद्ब्रह्मणो विदुः।
रात्रिं युगसहस्रान्तां तेऽहोरात्रविदो जनाः॥८.१७॥
ಸಹಸ್ರಯುಗಪರ್ಯಂತಂ ಅಹರ್ಯದ್ ಬ್ರಹ್ಮಣೋ ವಿದುಃ ।
ರಾತ್ರಿಂ ಯುಗಸಹಸ್ರಾಂತಾಂ ತೇಽಹೋರಾತ್ರವಿದೋ ಜನಾಃ ॥ 8-17॥
17. Those who are well-versed
In the field of measuring time,
In terms of days and nights,
Consider that a day of Brahma
Consists of a thousand Yugas
And the night of Brahma
Also consists of a thousand Yugas,
Each Yuga here referring to
The four-some Krita, Treta, Dwapara and Kali.
ಬ್ರಹ್ಮನ ಒಂದು ಹಗಲು ಒಂದು ಸಾವಿರ ಯುಗಗಳ ಕಾಲವನ್ನು ಹೊಂದಿರುತ್ತದೆ ಮತ್ತು ಬ್ರಹ್ಮನ ಒಂದು ರಾತ್ರಿಯೂ ಸಹ ಒಂದು ಸಾವಿರ ಯುಗಗಳ ಅವಧಿಯಾಗಿರುತ್ತದೆ ಎಂಬುದಾಗಿ ಅಹೋರಾತ್ರಿಗಳ ಕಾಲಜ್ಞಾನವನ್ನು ಚೆನ್ನಾಗಿ ಬಲ್ಲ ತತ್ವಜ್ಞರು ಅಭಿಪ್ರಾಯಪಡುತ್ತಾರೆ. ಇಲ್ಲಿ ಒಂದು ಯುಗವೆಂದರೆ ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳು ಎಂಬ ನಾಲ್ಕು ಯುಗಗಳನ್ನೊಳಗೊಂಡಿವೆ.
अव्यक्ताद्व्यक्तयः सर्वाः
प्रभवन्त्यहरागमे।
रात्र्यागमे प्रळीयन्ते
तत्रैवाव्यक्तसञ्ज्ञके॥८.१८॥
ಅವ್ಯಕ್ತಾದ್ ವ್ಯಕ್ತಯಃ ಸರ್ವಾಃ
ಪ್ರಭವಂತ್ಯಹರಾಗಮೇ ।
ರಾತ್ರ್ಯಾಗಮೇ ಪ್ರಲೀಯಂತೇ
ತತ್ರೈವಾವ್ಯಕ್ತಸಂಜ್ಞಕೇ ॥ 8-18॥
अव्यक्ताद्व्यक्तयः सर्वाः प्रभवन्त्यहरागमे। 
रात्र्यागमे प्रळीयन्ते तत्रैवाव्यक्तसञ्ज्ञके॥८.१८॥
ಅವ್ಯಕ್ತಾದ್ ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ ।
ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ ॥ 8-18॥
18. As each day of Brahma dawns
All the beings, both static and dynamic,
Take their birth from the Unmanifest state;
As each night falls
All those beings get dissolved
In the same Unmanifest state.
ಬ್ರಹ್ಮದೇವನ ಹಗಲು ಹುಟ್ಟಿದಾಗ ಎಲ್ಲ ಚರಾಚರ ವಸ್ತುಗಳು ಅವ್ಯಕ್ತ ಸ್ಥಿತಿಯಿಂದ ಅಭಿವ್ಯಕ್ತಿ ಪಡೆದು ಹುಟ್ಟುತ್ತವೆ. ಹಾಗೆಯೇ ಬ್ರಹ್ಮನ ರಾತ್ರಿಯಾಗುತ್ತಲೇ ಆ ಚರಾಚರ ವಸ್ತುಗಳು ಅದೇ ಅವ್ಯಕ್ತ ಮೂಲಪ್ರಕೃತಿಯಲ್ಲಿ ಮುಳುಗಿ ಲಯವನ್ನು ಹೊಂದುತ್ತವೆ.
भूतग्राम: स एवायं
भूत्वा भूत्वा प्रळीयते।
रात्र्यागमेऽवशः पार्थ
प्रभवत्यहरागमे॥८.१९॥
ಭೂತಗ್ರಾಮಃ ಸ ಏವಾಯಂ 
ಭೂತ್ವಾ ಭೂತ್ವಾ ಪ್ರಲೀಯತೇ ।
ರಾತ್ರ್ಯಾಗಮೇಽವಶಃ ಪಾರ್ಥ 
ಪ್ರಭವತ್ಯಹರಾಗಮೇ ॥ 8-19॥
भूतग्राम: स एवायं भूत्वा भूत्वा प्रळीयते। 
रात्र्यागमेऽवशः पार्थ प्रभवत्यहरागमे॥८.१९॥
ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ ।
ರಾತ್ರ್ಯಾಗಮೇಽವಶಃ ಪಾರ್ಥ ಪ್ರಭವತ್ಯಹರಾಗಮೇ ॥ 8-19॥
19. The entire collection
Of the same beings
Take birth again and again,
O Arjuna,
And get dissolved
At the time of Brahma’s nightfall.
Then at Brahma’s daybreak
Again they take birth.
This goes on and on.
ಎಲೈ ಅರ್ಜುನಾ! ಅಂತಹ ಈ ಭೂತಸಮುದಾಯವು ಪದೇ ಪದೇ ಹಗಲಿನಲ್ಲಿ ಹುಟ್ಟಿ, ಜನ್ಮ ತಳೆದು ಬ್ರಹ್ಮನ ರಾತ್ರಿ ಬರುತ್ತಲೇ ಪ್ರಳಯವಾಗಿ ಅವೆಲ್ಲ ನಿಸ್ಸಹಾಯಕವಾಗಿ ನಾಶವಾಗುತ್ತವೆ ಮತ್ತು ಪುನಃ ಬ್ರಹ್ಮನ ಹಗಲಾದಾಗ ಮತ್ತೆ ಸೃಷ್ಟಿಯು ಆರಂಭವಾಗಿ ಅವು ಮತ್ತೆ ಜೀವ ತಳೆಯುತ್ತವೆ. ಇದು ನಿರಂತರವಾಗಿ ನಡೆಯುವ ಕ್ರಿಯೆಯಾಗಿದೆ.
परस्तस्मात्तु भावोऽन्यो
व्यक्तोऽव्यक्तात्सनातनः।
यः स सर्वेषु भूतेषु
नस्यत्सु न विनस्यति॥८.२०॥
ಪರಸ್ತಸ್ಮಾತ್ತು ಭಾವೋಽನ್ಯೋ
ವ್ಯಕ್ತೋಽವ್ಯಕ್ತಾತ್ಸನಾತನಃ ।
ಯಃ ಸ ಸರ್ವೇಷು ಭೂತೇಷು 
ನಶ್ಯತ್ಸು ನ ವಿನಶ್ಯತಿ ॥ 8-20॥
परस्तस्मात्तु भावोऽन्योऽव्यक्तोऽव्यक्तात्सनातनः।
यः स सर्वेषु भूतेषु नस्यत्सु न विनस्यति॥८.२०॥
ಪರಸ್ತಸ್ಮಾತ್ತು ಭಾವೋಽನ್ಯೋಽವ್ಯಕ್ತೋಽವ್ಯಕ್ತಾತ್ಸನಾತನಃ ।
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ॥ 8-20॥
20. But beyond the Unmanifest
Mentioned above,
There is another and different
Unmanifest Being
That is Eternal, Invisible
And beyond the range of senses.
It does not perish even when
All the beings, dynamic and static,
Get completely dissolved.
ಆದರೆ ಮೇಲೆ ಹೇಳಿದ ಅವ್ಯಕ್ತ ಪ್ರಕೃತಿಯಿಂದಾಚೆ ಇನ್ನೊಂದು ಅವ್ಯಕ್ತವಾದ ಪ್ರಕೃತಿ ಇದೆ. ಅದು ನಿತ್ಯವಾದದ್ದು ಮತ್ತು ಈ ವ್ಯಕ್ತ ಮತ್ತು ಅವ್ಯಕ್ತ ಜಡವಸ್ತುವನ್ನು ಮೀರಿದ್ದು. ಅದು ವಿಲಕ್ಷಣವೂ, ಗೂಢವೂ ಸನಾತನವೂ ಹಾಗೂ ಪರಮೋನ್ನತವಾದದ್ದು. ಚರಾಚರವಸ್ತುಗಳು, ಸರ್ವಪ್ರಾಣಿಗಳು ಸಂಪುರ್ಣವಾಗಿ ನಶಿಸಿಹೋದರೂ ಅದು ಮಾತ್ರ ನಾಶವಾಗದೆ ಇದ್ದಂತೆಯೇ ಇರುತ್ತದೆ.
अव्यक्तोऽक्षर इत्युक्त:
तमाहुः परमां गतिम्।
यं प्राप्य न निवर्तन्ते
तद्धाम परमं मम॥८.२१॥ 
ಅವ್ಯಕ್ತೋಽಕ್ಷರ ಇತ್ಯುಕ್ತಃ
ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ
ತದ್ಧಾಮ ಪರಮಂ ಮಮ ॥ 8-21॥
अव्यक्तोऽक्षर इत्युक्तस्तमाहुः परमां गतिम्।
यं प्राप्य न निवर्तन्ते तद्धाम परमं मम॥८.२१॥ 
ಅವ್ಯಕ್ತೋಽಕ್ಷರ ಇತ್ಯುಕ್ತಃ ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ ॥ 8-21॥
21. What is said to be Avyakta
Or Unmanifest
And Akshara
Or Imperishable,
Is the Supreme Goal.
That also happens to be
My Supreme State.
No one having reached that State
Will ever go back
To the cycle of birth and death.
ಯಾವುದು ಅವ್ಯಕ್ತವೆಂದೂ, ಅಕ್ಷರವೆಂದೂ ಅಂದರೆ ಚ್ಯುತಿರಹಿತವೆಂದು ಹೇಳಲಾಗಿದೆಯೋ ಅದು ಪರಮಗತಿಯಾಗಿರುತ್ತದೆ. ಅದು ನನ್ನ ಪರಮ ಶ್ರೇಷ್ಠವಾದ ಸ್ಥಾನವೂ ಸಹ ಆಗಿದೆ. ಆ ಸ್ಥಾನವನ್ನು ತಲುಪಿದ ಯಾರೇ ಆಗಲೀ ಜನನ- ಮರಣಗಳ ಸುಳಿಯಿಂದ ಪಾರಾಗಿ ಮತ್ತೆ ಈ ಲೋಕಕ್ಕೆ ಬರುವುದಿಲ್ಲ.
पुरुषः स परः पार्थ
भक्त्या लभ्यस्त्वनन्यया।
यस्यान्तस्थानि भूतानि
येन सर्वमिदं ततम्॥८.२२॥
ಪುರುಷಃ ಸ ಪರಃ ಪಾರ್ಥ
ಭಕ್ತ್ಯಾ ಲಭ್ಯಸ್ತ್ವನನ್ಯಯಾ ।
ಯಸ್ಯಾಂತಃಸ್ಥಾನಿ ಭೂತಾನಿ 
ಯೇನ ಸರ್ವಮಿದಂ ತತಮ್ ॥ 8-22॥
पुरुषः स परः पार्थ भक्त्या लभ्यस्त्वनन्यया।
यस्यान्तस्थानि भूतानि येन सर्वमिदं ततम्॥८.२२॥
ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ ।
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ॥ 8-22॥
22. Arjuna,
It is by means of ananya bhakti
Or steady and intense devotion
That one can reach the Supreme Being
Who pervades the whole universe
And in whom dwell all beings.
ಅರ್ಜುನಾ! ಸಮಸ್ತ ಭೂತಜಾಲವು ಯಾರಲ್ಲಿ ನೆಲಸಿದೆಯೋ, ಮತ್ತು ಯಾರು ಎಲ್ಲೆಲ್ಲಿಯೂ ವ್ಯಾಪಿಸಿರುವನೋ, ಆ ಪರಮ ಪುರುಷನನ್ನು ಸೇರಲು ಅನನ್ಯ ಭಕ್ತಿಯಿಂದ ಮಾತ್ರ ಸಾಧ್ಯವಾಗುತ್ತದೆ.

यत्र काले त्वनावृत्तिं
आवृत्तिं चैव योगिनः।
प्रयाता यान्ति तं कालं
वक्ष्यामि भरतर्षभ॥८.२३॥
ಯತ್ರ ಕಾಲೇ ತ್ವನಾವೃತ್ತಿಂ
ಆವೃತ್ತಿಂ ಚೈವ ಯೋಗಿನಃ ।
ಪ್ರಯಾತಾ ಯಾಂತಿ ತಂ ಕಾಲಂ
ವಕ್ಷ್ಯಾಮಿ ಭರತರ್ಷಭ ॥ 8-23॥
यत्र काले त्वनावृत्तिमावृत्तिं चैव योगिनः।
प्रयाता यान्ति तं कालं वक्ष्यामि भरतर्षभ॥८.२३॥
ಯತ್ರ ಕಾಲೇ ತ್ವನಾವೃತ್ತಿಂ ಆವೃತ್ತಿಂ ಚೈವ ಯೋಗಿನಃ ।
ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ ॥ 8-23॥
23. O Arjuna,
I shall explain to you
The nature of time,
Depending on which
The Yogis either gain Liberation
And do not come back to this world
Or are reborn in this world
After visiting some other lokas.
ಎಲೈ ಅರ್ಜುನನೇ, ಯಾವ ಸಮಯದಲ್ಲಿ ಯೋಗಿಗಳು ಶರೀರ ತ್ಯಾಗ ಮಾಡಿದ ಮೇಲೆ ಪುನಃ ಈ ಲೋಕಕ್ಕೆ ಬಾರದೇ ಮೋಕ್ಷವನ್ನು ಹೊಂದುತ್ತಾರೆಂಬುದನ್ನೂ ಹಾಗೂ ಯಾವ ಕಾಲದಲ್ಲಿ ದೇಹತ್ಯಾಗದ ನಂತರ ಹಲವು ಬೇರೆ ಲೋಕಗಳನ್ನು ದರ್ಶಿಸಿ ಈ ಲೋಕದಲ್ಲಿ ಪುನರ್ಜನ್ಮವನ್ನು ಪಡೆಯುತ್ತಾರೆಂಬುದನ್ನೂ ನಾನೀಗ ನಿನಗೆ ವಿವರಿಸುತ್ತೇನೆ.

अग्निर्ज्योतिरहः शुक्लः
षण्मासा उत्तरायणम्।
तत्र प्रयाता गच्छन्ति
ब्रह्म ब्र्ह्मविदो जनl:॥८.२४॥
ಅಗ್ನಿರ್ಜ್ಯೋತಿರಹಃ ಶುಕ್ಲಃ 
ಷಣ್ಮಾಸಾ ಉತ್ತರಾಯಣಮ್ ।
ತತ್ರ ಪ್ರಯಾತಾ ಗಚ್ಛಂತಿ 
ಬ್ರಹ್ಮ ಬ್ರಹ್ಮವಿದೋ ಜನಾಃ ॥ 8-24॥
अग्निर्ज्योतिरहः शुक्लः षण्मासा उत्तरायणम्।
तत्र प्रयाता गच्छन्ति ब्रह्म ब्र्ह्मविदो जनl:॥८.२४॥
ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ ॥ 8-24॥
24. Uttarayana is the six-month period
Marked by Fire, Light, Day and the Bright Fortnight.
The seekers of Brahman with the knowledge of Brahman
Travelling during this Bright Period
Reach Brahman alone.
They do not come back.
ಪರಬ್ರಹ್ಮನನ್ನು ಪಡೆಯಲಿಚ್ಛಿಸುವವರು, ಬ್ರಹ್ಮಜ್ಞಾನದ ಸಹಾಯದಿಂದ, ಅಗ್ನಿದೇವತೆಯ ಪ್ರಭಾವದ ಕಾಲದಲ್ಲಿ, ಬೆಳಕಿನಲ್ಲಿ, ಹಗಲು ಶುಭಕ್ಷಣದಲ್ಲಿ, ಶುಕ್ಲಪಕ್ಷದಲ್ಲಿ, ಉತ್ತರಾಯಣದ ಆರು ಮಾಸಗಳ ಪುಣ್ಯಕಾಲದಲ್ಲಿ ಈ ಜಗತ್ತನ್ನು ಬಿಟ್ಟು ಪರಬ್ರಹ್ಮನನ್ನು ಸೇರುತ್ತಾರೆ. ಪುನಃ ಈ ಲೋಕಕ್ಕೆ ಹಿಂತಿರುಗಿ ಬರುವುದಿಲ್ಲ.

धूमो रात्रिस्तथा कृष्ण:
षण्मासा दक्षिणायनम्। 
तत्र चान्द्रमसं ज्योति:
योगी प्राप्य निवर्तते॥८.२५॥
ಧೂಮೋ ರಾತ್ರಿಸ್ತಥಾ ಕೃಷ್ಣಃ 
ಷಣ್ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಂ ಜ್ಯೋತಿಃ
ಯೋಗೀ ಪ್ರಾಪ್ಯ ನಿವರ್ತತೇ ॥ 8-25॥

धूमो रात्रिस्तथा कृष्ण: षण्मासा दक्षिणायनम्।
तत्र चान्द्रमसं ज्योतिर्योगी प्राप्य निवर्तते॥८.२५॥
ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಂ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ ॥ 8-25॥
25. On the other hand, the Yogi
Who travels during the six-month period
Called Dakshinayana,
Characterized by Smoke, Night and
The Dark Fortnight,
Reaches the Moon’s Light
And returns to be re-born. 
ಹೊಗೆಯಿಂದ ಆವರಿಸಲ್ಪಟ್ಟಿರುವ ಸ್ಥಳದಲ್ಲಿ, ರಾತ್ರಿಕಾಲದಲ್ಲಿ, ಕೃಷ್ಣಪಕ್ಷದಲ್ಲಿ, ದಕ್ಷಿಣಾಯಣದ ಆರು ಮಾಸಗಳಲ್ಲಿ ಮರಣಹೊಂದುವ ಯೋಗಿಯು ಚಂದ್ರಲೋಕದ ಬೆಳಕನ್ನು ಸೇರುತ್ತಾನೆ, ಹಾಗೂ ಈ ಲೋಕದಲ್ಲಿ ಪುನರ್ಜನ್ಮವನ್ನು ಪಡೆದು ಹಿಂದಿರುಗುತ್ತಾನೆ.
शुक्लकृष्णे गती ह्येते
जगतः शाश्वते मते।
एकया यात्यनावृत्तिं
अन्ययाऽवर्तते पुनः॥८.२६॥
ಶುಕ್ಲಕೃಷ್ಣೇ ಗತೀ ಹ್ಯೇತೇ
ಜಗತಃ ಶಾಶ್ವತೇ ಮತೇ ।
ಏಕಯಾ ಯಾತ್ಯನಾವೃತ್ತಿಂ
ಅನ್ಯಯಾವರ್ತತೇ ಪುನಃ ॥ 8-26॥
शुक्लकृष्णे गती ह्येते जगतः शाश्वते मते।
एकया यात्यनावृत्तिमन्ययाऽवर्तते पुनः॥८.२६॥
ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ ।
ಏಕಯಾ ಯಾತ್ಯನಾವೃತ್ತಿಂ ಅನ್ಯಯಾವರ್ತತೇ ಪುನಃ ॥ 8-26॥
26. These are the Two Courses,
The Bright Course and the Dark Course,
Devayaana and Pitruyaana.
They are deemed eternal Courses.
One who takes the first Course does not return,
Whereas one returns to the world
To be re-born by taking the second Course.
ಏಕೆಂದರೆ ಜಗತ್ತಿನ ಈ ಎರಡು ಪ್ರಕಾರದ, ಶುಕ್ಲ ಮತ್ತು ಕೃಷ್ಣ ಅರ್ಥಾತ್ ದೇವಯಾನ ಮತ್ತು ಪಿತೃಯಾನ ಮಾರ್ಗಗಳು ಸನಾತನವಾದುಗಳೆಂದು ತಿಳಿಯಲಾಗಿದೆ. ಮೊದಲನೆಯ ಮಾರ್ಗದ ಮೂಲಕ ಪ್ರಯಾಣ ಬೆಳಿಸಿದವರು ಅರ್ಥಾತ್ ಅರ್ಚಿಮಾರ್ಗದಿಂದ ಹೋದವರು ಸದ್ಗತಿಯನ್ನು ಹೊಂದಿ ಮರಳಿ ಬರುವುದಿಲ್ಲ. ಎರಡನೆಯೆ ಮಾರ್ಗದ ಮೂಲಕ ಹೋದವರು ಅರ್ಥಾತ್ ಧೂಮಮಾರ್ಗದಿಂದ ಹೋದ ಸಕಾಮಕರ್ಮಿಯು ಮತ್ತೆ ಹಿಂದಿರುಗಿ ಬರುತ್ತಾನೆ. ಅರ್ಥಾತ್ ಜನ್ಮ- ಮೃತ್ಯುವನ್ನು ಪಡೆಯುತ್ತಾನೆ.
नैते सृती पार्थ जानन्
योगी मुह्यति कश्चन।
तस्मात् सर्वेषु कालेषु
योगयुक्तो भवार्जुन॥८.२७॥
ನೈತೇ ಸೃತೀ ಪಾರ್ಥ ಜಾನನ್
ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ಸರ್ವೇಷು ಕಾಲೇಷು
ಯೋಗಯುಕ್ತೋ ಭವಾರ್ಜುನ ॥ 8-27॥
नैते सृती पार्थ जानन् योगी मुह्यति कश्चन।
तस्मात् सर्वेषु कालेषु योगयुक्तो भवार्जुन॥८.२७॥
ನೈತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ॥ 8-27॥
27. O Arjuna,
The Yogi, the Seeker,
Who knows these two Courses.
And the difference between them,
Will not fall into any delusion whatsoever.
Therefore, Arjuna,
Engage yourself in Yoga
At all times.
ಓ ಅರ್ಜುನಾ! ಈ ಪ್ರಕಾರದ ಎರಡೂ ಮಾರ್ಗಗಳನ್ನು ಮತ್ತು ಅವುಗಳ ವ್ಯತ್ಯಾಸವನ್ನು ತತ್ವದಿಂದ ತಿಳಿದುಕೊಂಡ ಯಾವುದೇ ಯೋಗಿಯು ಗೊಂದಲಕ್ಕೊಳಗಾಗುವುದಿಲ್ಲ. ಈ ಕಾರಣದಿಂದ ಎಲ್ಲ ಕಾಲದಲ್ಲೂ ನೀನು ಸಮಬುದ್ಧಿರೂಪವಾದ ಯೋಗದಿಂದ ಯುಕ್ತನಾಗು, ಅರ್ಥಾತ್ ನಿರಂತರ ನನ್ನ ಪ್ರಾಪ್ತಿಗಾಗಿ ಸಾಧನೆ ಮಾಡು.

वेदेषु यज्ञेषु तपःसु चैव
दानेषु यत् पुण्यफलं प्रदिष्टम्।
अत्येति तत् सर्वमिदं विदित्वा
योगी परं स्थानमुपैति चाद्यम्॥८.२८॥
ವೇದೇಷು ಯಜ್ಞೇಷು ತಪಃಸು ಚೈವ
ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಮ್ ।
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ
ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ॥ 8-28॥

वेदेषु यज्ञेषु तपःसु चैव दानेषु यत् पुण्यफलं प्रदिष्टम्।
अत्येति तत् सर्वमिदं विदित्वा योगी परं स्थानमुपैति चाद्यम्॥८.२८॥
ವೇದೇಷು ಯಜ್ಞೇಷು ತಪಃಸು ಚೈವ ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಮ್ ।
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ॥ 8-28॥
28. The seeker who engages
At all times in Yoga
Is told by Krishna
How to realize and reach
The Imperishable Brahman
Or Akshara Parabrahma.
Also he is given to understand
The Meritorious Benefits or
Punya Phala coming from
The learning of Vedas,
The performing of Yagnas,
Observing of strict austerities,
And making of gifts or daanas.
The Yogi, the Seeker of Liberation
Knows these Benefits
And yet transcends them.
Thereby with firm and intense devotion,
He goes to attain
The Supreme Primal State
Or Brahma Padam.

ಸದಾ ಯೋಗದಲ್ಲಿ ತೊಡಗಿಸಿಕೊಂಡ ಜ್ಞಾನದಾಹಿಗೆ, ಅಕ್ಷರಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಂಡು ಅವನನ್ನು ಸೇರುವ ಬಗೆಯನ್ನು ಶ್ರೀಕೃಷ್ಣನು ತಿಳಿಸಿಕೊಡುತ್ತಾನೆ.
ಮೋಕ್ಷ ಪಿಪಾಸುವಾದ ಯೋಗಿಗೆ ವೇದಾಧ್ಯಯನದಿಂದ, ಯಜ್ಞವನ್ನಾಚರಿಸುವದರಿಂದ, ಕಠಿಣ ತಪಸ್ಸಿನಿಂದ ಮತ್ತು ದಾನಮಾಡುವುದರಿಂದ ಉಂಟಾಗುವ ಪುಣ್ಯಫಲಗಳನ್ನು ಮೀರಿ, ನಿರಂತರ ಹಾಗೂ ಅತ್ಯಂತ ಭಕ್ತಿಯನ್ನು ತೋರಿಸುವಾತನು ಮೇಲೇರಿ ಬ್ರಹ್ಮಪಾದವನ್ನು, ಪರಮಸ್ಥಾನವನ್ನು ಸೇರುತ್ತಾನೆ.

ऒम् तत्सदिति
ಓಂ ತತ್ಸದಿತಿ
श्रीमद्भगवद्गितासू
ಶ್ರೀಮದ್ಭಗವದ್ಗೀತಾಸೂ
उपनिषत्सु
ಉಪನಿಷತ್ಸು
ब्रह्म विद्यायां
ಬ್ರಹ್ಮವಿದ್ಯಾಯಾಂ
यॊगशास्त्रॆ
ಯೋಗಶಾಸ್ತ್ರೇ
श्रीकृष्णार्जुनसंवादॆ
ಶ್ರೀಕೃಷ್ಣಾರ್ಜುನಸಂವಾದೇ
अक्षरब्रह्मयोगो नाम 
ಅಕ್ಷರಬ್ರಹ್ಮಯೋಗೋ ನಾಮ 
अष्टमोऽध्यायः
ಅಷ್ಟಮೋಧ್ಯಾಯಃ
ऒं ततसत्
ಓಂ ತತ್ಸತ್ 
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಅಕ್ಷರ ಬ್ರಹ್ಮಯೋಗವೆಂಬ ಹೆಸರಿನ ಎಂಟನೆಯ ಅಧ್ಯಾಯವು ಮುಗಿದುದು.

The End of Chapter Eight