SRIMAD BHAGAVAD GITA

Chapter Three

Karma Yoga

A SLOKA A DAY 
PUBLISHED BY LANKA KRISHNAMURTI FOUNDATION
(
https://www.krishnamurtifoundation.com/lanka/)

अथ कर्मयॊगॊनाम तृतीयॊध्यायः

ಅಥ ಕರ್ಮಯೊಗೋನಾಮ ತೃತೀಯೋಽಧ್ಯಾಯಃ

अर्जुन उवाच :

ज्यायसी चेत्कर्मणस्ते

मता बुद्धिर्जनार्दन।

तत्किं कर्मणि घोरे मां

नियोजयसि केशव?॥३.१॥

ಅರ್ಜುನ ಉವಾಚ

ಜ್ಯಾಯಸೀ ಚೇತ್ಕರ್ಮಣಸ್ತೇ

ಮತಾ ಬುದ್ಧಿರ್ಜನಾರ್ದನ

ತತ್ಕಿಂ ಕರ್ಮಣಿ ಘೋರೇ ಮಾಂ

ನಿಯೋಜಯಸಿ ಕೇಶವ 3-1

 1. Arjuna said:

Oh Janardana, if in your opinion

The path of jnana or wisdom

Is preferable to that of karma or action,

Why do you drive me to take to action

Which involves causing terrible violence?

ಮೂರನೇ ಅಧ್ಯಯ

ಕರ್ಮಯೊಗ

. ಅರ್ಜನ ಹೇಳಿದನು

ಹೇ ಜನಾರ್ದನ, ನಿನ್ನ ಅಭಿಪ್ರಾಯದಲ್ಲಿ ಕರ್ಮದ ಹಾದಿಗಿಂತ ಉತ್ತಮವಾದ ಜ್ಞಾನದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕಿಂದಿರುವಾಗ ಯುದ್ಧವೆಂಬ ಘೋರ ಹಿಂಸೆಯನ್ನು ಒಳಗೊಂಡ ಕರ್ಮದ ಹಾದಿಗೆ ನನ್ನನ್ನೇಕೆ ತೊಡಗಿಸುತ್ತಿರುವೆ?

व्यामिस्रेणेव वाक्येन

बुद्धिं मोहयसीव मे।

तदेकं वद निश्चित्य

येन श्रेयोऽहमाप्नुयाम्॥३.२॥

ವ್ಯಾಮಿಶ್ರೇಣೇವ ವಾಕ್ಯೇನ

ಬುದ್ಧಿಂ ಮೋಹಯಸೀವ ಮೇ ।

ತದೇಕಂ ವದ ನಿಶ್ಚಿತ್ಯ

ಯೇನ ಶ್ರೇಯೋಽಹಮಾಪ್ನುಯಾಮ್॥ 3-2

 Krishna, I get confused

 With the ambiguity in your  

 statement.

 Tell me precisely which course –

 The path of Gnana or the path of      

 Karma

 I should take to attain the greatest

 Good.

ಕೃಷ್ಣಾ, ನಿನ್ನ ಹೇಳಿಕೆಯಲ್ಲಿನ ದ್ವಂದ್ವದಿಂದ ನಾನು ಗೊಂದಲಗೊಂಡಿದ್ದೇನೆ. ಅತ್ತ್ಯುತ್ತಮವಾದುದನ್ನು ಹೊಂದಲು ನಾನು ಯಾವ ಹಾದಿಯನ್ನು ಅಂದರೆ ಜ್ಞಾನದ ಹಾದಿಯನ್ನು ಅಥವಾ ಕರ್ಮದ ಹಾದಿಯನ್ನು ಆಯ್ಕೆಮಾಡಿಕೊಳ್ಳಬೇಕೆಂಬುದನ್ನು ನನಗೆ ಖಚಿತವಾಗಿ ಹೇಳು.

श्रीभगवानुवाच

लोकेऽस्मिन्द्विविधा निष्ठा

पुरा प्रोक्ता मयानघ।

ज्ञानयोगेन साङ्ख्यानां

कर्मयोगेन योगिनाम्॥३.३॥

ಶ್ರೀಭಗವಾನುವಾಚ

ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ

ಪುರಾ ಪ್ರೋಕ್ತಾ ಮಯಾನಘ

ಜ್ಞಾನಯೋಗೇನ ಸಾಂಖ್ಯಾನಾಂ

ಕರ್ಮಯೋಗೇನ ಯೋಗಿನಾಮ್ 3-3

3.Sri Bhagavan said:

O Sinless One,

Very long time ago, in this world,

It was proclaimed by me

Prescribing two separate disciplines,

According to one’s inherent tendencies:

Jnanamarga for seekers of wisdom

And Karmamarga for doers of action

With detachment.

ಭಗವಂತನು ಹೇಳಿದನು:

ಹೇ ಪಾಪರಹಿತನೇ! ಲೋಕದಲ್ಲಿ, ಬಹಳ ಹಿಂದೆ, ಪ್ರತಿಯೊಬ್ಬರ ಅಂತರ್ಗತವಾದ ಪ್ರವೃತ್ತಿಗೆ ಅನುಗುಣವಾಗಿ, ಎರಡು ಪ್ರಕಾರದ ಮುಕ್ತಿ ಮಾರ್ಗಗಳು ನನ್ನಿಂದ ಹೇಳಲ್ಪಟ್ಟಿದೆ. ಒಂದು ಪ್ರಜ್ಞಾವಂತರಿಗೆ ಜ್ಞಾನಮಾರ್ಗ ಮತ್ತು ಎರಡು ನಿಷ್ಕಾಮ ಯೋಗಿಗಳಿಗೆ ಕರ್ಮ ಮಾರ್ಗ.

कर्मणामनारंभात्

नैष्कर्म्यं पुरुषोऽश्नुते।

सन्यसनादेव

सिद्धिं समधिगच्छति॥३.४॥

ಕರ್ಮಣಾಮನಾರಂಭಾತ್

ನೈಷ್ಕರ್ಮ್ಯಂ ಪುರುಷೋಽಶ್ನುತೇ

ಸಂನ್ಯಸನಾದೇವ

ಸಿದ್ಧಿಂ ಸಮಧಿಗಚ್ಛತಿ 3-4

 1. By not doing action

As prescribed by the scriptures,

A person does not get freedom from action.

Mere renunciation of action

Also does not ensure perfection

In terms of liberation.

ಗ್ರಂಥಗಳಲ್ಲಿ ಹೇಳಿರುವಂತೆ, ಕರ್ಮವನ್ನು ಆಚರಿಸದೆ ಅರ್ಥಾತ್ ಕರ್ಮಾಚರಣೆ ಮಾಡದೆ ನಿಷ್ಕರ್ಮತೆಯನ್ನು ಅಂದರೆ ಯೋಗನಿಷ್ಠೆಯನ್ನು ಪಡೆಯಲಾರನು. ಹಾಗೆಯೇ ಕೇವಲ ಕರ್ಮವನ್ನು ಬಿಟ್ಟ ಮಾತ್ರದಿಂದಲೇ ಸಿದ್ಧಿ ಎಂದರೆ ಸಾಂಖ್ಯನಿಷ್ಠೆಯನ್ನೂ ಪಡೆಯಲಾರನು.

हि कश्चित्क्षणमपि

जातु तिष्ठत्यकर्मकृत्।

कार्यते ह्यवशः कर्म

सर्वः प्रकृतिजैर्गुणैः॥३.५॥

ಹಿ ಕಶ್ಚಿತ್ಕ್ಷಣಮಪಿ

ಜಾತು ತಿಷ್ಠತ್ಯಕರ್ಮಕೃತ್

ಕಾರ್ಯತೇ ಹ್ಯವಶಃ ಕರ್ಮ

ಸರ್ವಃ ಪ್ರಕೃತಿಜೈರ್ಗುಣೈಃ 3-5

 1.      None can remain, even for a moment,

Without doing any action.

Everyone keeps doing some work or the other,

Being constantly propelled

By the three Gunas of Nature:

Sattva, Rajas and Tamas.

ಕ್ಷಣ ಮಾತ್ರವೂ ಕರ್ಮವನ್ನು ಮಾಡದೆ ಯಾರೂ ಸಹಾ ಇರಲಾರರು . ಪ್ರಕೃತಿಯಲ್ಲಿನ ತ್ರಿಗುಣಗಳಾದ ಸತ್ವ, ರಜಸ್ಸು, ಮತ್ತು ತಮಸ್ಸು ಇವುಗಳಿಂದ ಸತತವಾಗಿ ಪರವಶನಾಗಿ ಪ್ರತಿಯೊಬ್ಬನೂ ಯಾವುದೋ ಒಂದು ಕರ್ಮವನ್ನು ಮಾಡುತ್ತಲೇ ಇರುತ್ತಾನೆ.

कर्मेन्द्रियाणि सम्यम्य

आस्ते मनसा स्मरन्।

इन्द्रियार्थान्विमूढात्मा

मिथ्याचारः उच्यते॥३.६॥

ಕರ್ಮೇಂದ್ರಿಯಾಣಿ ಸಂಯಮ್ಯ

ಆಸ್ತೇ ಮನಸಾ ಸ್ಮರನ್

ಇಂದ್ರಿಯಾರ್ಥಾನ್ವಿಮೂಢಾತ್ಮಾ

ಮಿಥ್ಯಾಚಾರಃ ಉಚ್ಯತೇ 3-6

 

 1.      He is said to be a hypocrite

Who claims to bring the organs of action,

Like tongue, hands, feet, etc.

Forcefully under control,

But allows his mind to dwell freely

On the objects of senses

Like sound, touch, form, taste and smell.

ಯಾರು ತನ್ನ ಮನಸ್ಸನ್ನು, ಶಬ್ದ, ಸ್ಪರ್ಶ, ಆಕಾರ, ರೂಪ, ರುಚಿ, ವಾಸನೆ ಇವುಗಳ ಮೇಲೆ ನಿರರ್ಗಳವಾಗಿ ಹರಿಬಿಟ್ಟು, ಕರ್ಮೇಂದ್ರಿಯಗಳಾದ, ನಾಲಿಗೆ, ಕೈಗಳು, ಕಾಲುಗಳು, ಇತ್ಯಾದಿಯನ್ನು ಬಲವಂತವಾಗಿ ನಿಗ್ರಹಿಸಲು ಪ್ರಯತ್ನಿಸುತ್ತಾನೆಯೋ  ಅಂತಹವನನ್ನು ಡಾಂಭಿಕನೆಂದು ಕರೆಯುತ್ತಾರೆ.

यस्त्विन्द्रियाणि मनसा

नियम्यारभतेऽर्जुन।

कर्मेन्द्रियैः कर्मयोगं

असक्तः विशिष्यते॥३.७॥

ಯಸ್ತ್ವಿಂದ್ರಿಯಾಣಿ ಮನಸಾ

ನಿಯಮ್ಯಾರಭತೇಽರ್ಜುನ

ಕರ್ಮೇಂದ್ರಿಯೈಃ ಕರ್ಮಯೋಗಂ

ಅಸಕ್ತಃ ವಿಶಿಷ್ಯತೇ 3-7

 1.      He who starts practising Karma Yoga

With the help of organs of action

Like tongue, hands and feet,

After exercising control over sense organs

Like eyes, ears, nose, tongue and skin,

By the discriminating mind,

And keeps himself unattached,

he attains excellence.

ಪಂಚೇದ್ರಿಯಗಳಾದ ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ, ಇವುಗಳ ಮೇಲೆ ಹತೋಟಿಯನ್ನು ಸಾಧಿಸಿ ಕರ್ಮೇಂದ್ರಿಯಗಳಾದ ನಾಲಿಗೆ, ಕೈಗಳು ಮತ್ತು ಪಾದಗಳ ಸಹಾಯದಿಂದ ಯಾರು ಕರ್ಮಯೋಗವನ್ನು ಆಚರಿಸಲು ಪ್ರಾರಂಭಿಸುತ್ತಾನೆಯೋ ಮತ್ತು ಇವುಗಳಿಂದ ವಿವಶನಾಗಿರುವನೋ, ಅರ್ಜನಾ, ಅವನು ಶ್ರೇಷ್ಠತೆಯನ್ನು ಹೊಂದುತ್ತಾನೆ.

नियतं कुरु कर्म त्वं

कर्म ज्यायो ह्यकर्मणः।

शरीरयात्रापि ते

प्रशिद्ध्येदकर्मणः॥३.८॥

ನಿಯತಂ ಕುರು ಕರ್ಮ ತ್ವಂ

ಕರ್ಮ ಜ್ಯಾಯೋ ಹ್ಯಕರ್ಮಣಃ

ಶರೀರಯಾತ್ರಾಪಿ ತೇ

ಪ್ರಸಿದ್ಧ್ಯೇದಕರ್ಮಣಃ 3-8

 1.      Do such work as prescribed by the Shastras.

Action is always preferable to non-action.

If you give up action, you cannot carry on

Even day-to-day life with the body.

ನೀನು ಶಾಸ್ತ್ರವಿಹಿತವಾದ ಕರ್ತವ್ಯ ಕರ್ಮವನ್ನು ಮಾಡು. ಏಕೆಂದರೆ ಕರ್ಮ ಮಾಡದೇ ಇರುವುದಕ್ಕಿಂತ ಕರ್ಮ ಮಾಡುವುದು ಶ್ರೇಷ್ಠವಾಗಿದೆ. ನೀನು ಕರ್ಮವನ್ನು ತ್ಯಜಿಸಿದರೆ, ದೇಹದಿಂದ ದಿನನಿತ್ಯದ ಜೀವನಯಾತ್ರೆಯನ್ನೂ ಸಹ ನೇರವೇರಿಸಲಾಗದು.

नियतं कुरु कर्म त्वं

कर्म ज्यायो ह्यकर्मणः।

शरीरयात्रापि ते

प्रशिद्ध्येदकर्मणः॥३.८॥

ನಿಯತಂ ಕುರು ಕರ್ಮ ತ್ವಂ

ಕರ್ಮ ಜ್ಯಾಯೋ ಹ್ಯಕರ್ಮಣಃ

ಶರೀರಯಾತ್ರಾಪಿ ತೇ

ಪ್ರಸಿದ್ಧ್ಯೇದಕರ್ಮಣಃ 3-8

 1. Do such work as prescribed by the Shastras.

Action is always preferable to non-action.

If you give up action, you cannot carry on

Even day-to-day life with the body.

 

ನೀನು ಶಾಸ್ತ್ರವಿಹಿತವಾದ ಕರ್ತವ್ಯ ಕರ್ಮವನ್ನು ಮಾಡು. ಏಕೆಂದರೆ ಕರ್ಮ ಮಾಡದೇ ಇರುವುದಕ್ಕಿಂತ ಕರ್ಮ ಮಾಡುವುದು ಶ್ರೇಷ್ಠವಾಗಿದೆ. ನೀನು ಕರ್ಮವನ್ನು ತ್ಯಜಿಸಿದರೆ, ದೇಹದಿಂದ ದಿನನಿತ್ಯದ ಜೀವನಯಾತ್ರೆಯನ್ನೂ ಸಹ ನೇರವೇರಿಸಲಾಗದು.

यज्ञार्थात्कर्मणोऽन्यत्र

लोकोऽयं कर्मबन्धन:

तदर्थं कर्म कौन्तेय

मुक्तसङ्गः समाचर॥३.९॥

ಯಜ್ಞಾರ್ಥಾತ್ಕರ್ಮಣೋಽನ್ಯತ್ರ

ಲೋಕೋಽಯಂ ಕರ್ಮಬಂಧನಃ

ತದರ್ಥಂ ಕರ್ಮ ಕೌಂತೇಯ

ಮುಕ್ತಸಂಗಃ ಸಮಾಚರ 3-9

 1.      Actions other than those

Meant for performing yagna or sacrifice

Cause bondage.

O Arjuna, be free from attachment

And do actions in the spirit of yagna or sacrifice

To please the Supreme One.

ಯಜ್ಞ ಅಥವಾ ಆಹುತಿಗಾಗಿ ಮೀಸಲಿಟ್ಟ ಕರ್ಮಗಳ ವಿನಃ ಮಿಕ್ಕವುಗಳು ಜನರಿಗೆ ಬಂಧನವನ್ನುಂಟು ಮಾಡುತ್ತವೆ. ಹೇ ಅರ್ಜುನಾ! ಬಂಧನದಿಂದ ಮುಕ್ತನಾಗಿರು, ಮತ್ತು ಆಸಕ್ತಿಯನ್ನು ಬಿಟ್ಟು ಭಗವಂತನ ತೃಪ್ತಿಗಾಗಿ ಯಜ್ಞಾರ್ಥವಾಗಿ ಕರ್ತವ್ಯಕರ್ಮವನ್ನು ಮಾಡು.

सहयज्ञाः प्रजा सृष्ट्वा

पुरोवाच प्रजापतिः।

अनेन प्रसविष्यध्वं

एष वोऽस्त्विष्टकामधुक्॥३.१०॥

ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ

ಪುರೋವಾಚ ಪ್ರಜಾಪತಿಃ

ಅನೇನ ಪ್ರಸವಿಷ್ಯಧ್ವಂ

ಏಷ ವೋಽಸ್ತ್ವಿಷ್ಟಕಾಮಧುಕ್ 3-10

 1.   Long, very long ago, before Creation,

Prajapati, the Creator, created all the beings

Along with the performance of yagna or sacrifice

And said:  increase and multiply

By means of Yagna.

May your desires be fulfilled

By performing yagna.

ಬಹಳ ಹಿಂದೆ, ಸೃಷ್ಟಿಕಾರ್ಯಕ್ಕಿಂತಲೂ ಮೊದಲು, ಕಲ್ಪದ ಆದಿಯಲ್ಲಿ, ಪ್ರಜಾಪತಿ ಬ್ರಹ್ಮನಾದ ಸೃಷ್ಟಿಕರ್ತನು ಯಜ್ಞಗಳೊಂದಿಗೆ ಪ್ರಜೆಗಳನ್ನು ಸೃಷ್ಟಿಸಿ ಯಜ್ಞದಿಂದ ನೀವು ಸಮೃದ್ಧಿಯನ್ನು ಪಡೆಯಿರಿ. ಯಜ್ಞವು ನಿಮಗೆ ಇಚ್ಛಿಸಿದ ಭೋಗಗಳನ್ನು, ಇಷ್ಟ ಅರ್ಥಗಳನ್ನು ಪ್ರದಾನ ಮಾಡುವಂತಹುದಾಗಲಿಎಂದು ಹೇಳಿದನು.

दैवान्भावयतानेन

ते देवा भावयन्तु वः।

परस्परं भावयन्तः

श्रेयः परमवाप्स्यथ॥३.११॥

ದೇವಾನ್ಭಾವಯತಾನೇನ

ತೇ ದೇವಾ ಭಾವಯಂತು ವಃ

ಪರಸ್ಪರಂ ಭಾವಯಂತಃ

ಶ್ರೇಯಃ ಪರಮವಾಪ್ಸ್ಯಥ 3-11

 1.   Satisfy the Devas

By performing the yagna;

May the Devas too, through the yagna,

Satisfy you with the fulfilment of your desires.

Thus by mutual gratification,

May you attain a state of high excellence.

ನೀವುಗಳು ಯಜ್ಞಕರ್ಮಗಳಿಂದ ದೇವತೆಗಳನ್ನು ತೃಪ್ತಿಪಡಿಸಿರಿ. ದೇವತೆಗಳೂ ಸಹ ಯಜ್ಞದ ಮೂಲಕ ನಿಮ್ಮನ್ನು ಪೋಷಿಸಿ, ಮಳೆ ಮೊದಲಾದುವುಗಳಿಂದ ನಿಮ್ಮನ್ನು ತೃಪ್ತಿಪಡಿಸಲಿ. ರೀತಿ ಪರಸ್ಪರ ಸಹಕಾರದಿಂದ ನೀವು ಪರಮ ಶ್ರೇಯಸ್ಸನ್ನು ಹೊಂದುವಂತಾಗಲಿ.

इष्टान्भोगान्हि वो देवाः

दास्यन्ते यज्ञभाविताः।

तैर्दत्तानप्रदायैभ्यो

यो भुङ्क्ते स्तेन एव सः॥३.१२॥

ಇಷ್ಟಾನ್ಭೋಗಾನ್ಹಿ ವೋ ದೇವಾಃ

ದಾಸ್ಯಂತೇ ಯಜ್ಞಭಾವಿತಾಃ

ತೈರ್ದತ್ತಾನಪ್ರದಾಯೈಭ್ಯೋ

ಯೋ ಭುಂಕ್ತೇ ಸ್ತೇನ ಏವ ಸಃ 3-12

 1.   Satisfied by the offerings

Made through the yagna,

The devas will grant all enjoyments you desire.

If, in return, you do not pay back to them,

You deserve to be called a thief.

ಯಜ್ಞದ ಮುಖಾಂತರ ಮಾಡಿದ ನಿಮ್ಮ ಸಮರ್ಪಣೆಯಿಂದ ಸಂತುಷ್ಟರಾದ ದೇವತೆಗಳು ನೀವು ಇಚ್ಛಿಸಿದ ಪ್ರತಿಯೊಂದು ಭೋಗಗಳನ್ನು, ನಿಶ್ಚಯವಾಗಿ ಕೊಡುವರು. ಪ್ರಕಾರವಾಗಿ ಅವರಿಂದ ಅನುಗ್ರಹಿಸಲ್ಪಟ್ಟ ಭೋಗವಸ್ತುಗಳನ್ನು, ಅವರಿಗೇ ನಿವೇದಿಸದೆ ಯಾರು ತಾನೇ ಅನುಭವಿಸುತ್ತಾನೆಯೋ ಅವನು ನಿಜವಾಗಿಯೂ ಕಳ್ಳನೆಂದು ಕರೆಯಲು ಯೋಗ್ಯನಾಗಿದ್ದಾನೆ.

यज्ञशिष्टाशिनः सन्तो

मुच्यन्ते सर्वकिल्बिषैः।

भुञ्जते ते त्वघं पापाः

ये पचन्त्यात्मकारणात्॥३.१३॥

ಯಜ್ಞಶಿಷ್ಟಾಶಿನಃ ಸಂತೋ

ಮುಚ್ಯಂತೇ ಸರ್ವಕಿಲ್ಬಿಷೈಃ

ಭುಂಜತೇ ತೇ ತ್ವಘಂ ಪಾಪಾಃ

ಯೇ ಪಚಂತ್ಯಾತ್ಮಕಾರಣಾತ್ 3-13

 1.   After making offerings to the devas,

Virtuous people eat the remnants

At the end of the yagna or sacrifice.

They thus get rid of all their sins.

But those who cook for themselves and eat,

They live on their own sins.

ದೇವರಿಗೆ ಸಮರ್ಪಣೆ ಮಾಡಿ, ಯಜ್ಞ ಶೇಷವನ್ನು ಭುಜಿಸುವ ಸತ್ಪುರಷರು ಸಮಸ್ತ ಪಾಪಗಳಿಂದ ಮುಕ್ತರಾಗುತ್ತಾರೆ. ಆದರೆ ವೈಯುಕ್ತಿಕ ಸಂತೋಷಕ್ಕಾಗಿ, ತಮ್ಮ ಶರೀರ ಪೋಷಣೆಗಾಗಿ, ಆಹಾರವನ್ನು ತಯಾರಿಸಿ ಉಣ್ಣುವರೋ ಅವರು ಖಂಡಿತವಾಗಿಯೂ ತಮ್ಮ ಪಾಪವನ್ನೇ ಊಟಮಾಡುತ್ತಾರೆ.

अन्नाद्भवन्ति भूतानि

पर्जन्यादन्नसम्भवः।

यज्ञाद्भवति पर्जन्यो

यज्ञः कर्मसमुद्भवः॥३.१४॥

ಅನ್ನಾದ್ಭವಂತಿ ಭೂತಾನಿ

ಪರ್ಜನ್ಯಾದನ್ನಸಂಭವಃ

ಯಜ್ಞಾದ್ಭವತಿ ಪರ್ಜನ್ಯೋ

ಯಜ್ಞಃ ಕರ್ಮಸಮುದ್ಭವಃ 3-14

 1.   All beings are born of food;

Food is obtained from rain;

Rain is the result of yagna;

And yagna is the outcome of doing work.

ಅನ್ನದಿಂದ ಭೂತಪ್ರಾಣಿಗಳು ಉಂಟಾಗುತ್ತವೆ. ಮಳೆಯಿಂದ ಅನ್ನದ ಉತ್ಪತ್ತಿಯಾಗುತ್ತದೆ. ಯಜ್ಞದಿಂದ ಮಳೆಯಾಗುತ್ತದೆ. ಯಜ್ಞವು ನಿಯತ ಕರ್ಮಗಳಿಂದ ಉದ್ಭವಿಸುತ್ತದೆ.

कर्म ब्रह्मोद्भवं विद्धि

ब्रह्माक्षर समुद्भवं।

तस्मात्सर्वगतं ब्रह्म

नित्यं यज्ञे प्रतिष्ठितम्॥३.१५॥

 

ಕರ್ಮ ಬ್ರಹ್ಮೋದ್ಭವಂ ವಿದ್ಧಿ

ಬ್ರಹ್ಮಾಕ್ಷರಸಮುದ್ಭವಮ್

ತಸ್ಮಾತ್ಸರ್ವಗತಂ ಬ್ರಹ್ಮ

ನಿತ್ಯಂ ಯಜ್ಞೇ ಪ್ರತಿಷ್ಠಿತಮ್ 3-15

 1.  Know, Arjuna, that

Karma or action is born of the Vedas;

The Vedas are born of the Supreme Self;

So the Vedas, self-luminous and all-pervading,

Are well-established in the yagna or sacrifice.

ಇದನ್ನು ತಿಳಿದುಕೋ ಅರ್ಜುನಾ! ಕರ್ಮವು ವೇದದಿಂದ ಉತ್ಪನ್ನವಾಗುತ್ತದೆ. ವೇದವು ಅವಿನಾಶಿಯಾದ, ದೇವೋತ್ತಮ ಪರಮ ಪುರುಷನಿಂದ ಹುಟ್ಟಿದೆ. ಆದುದರಿಂದ ಸರ್ವವ್ಯಾಪಕನಾದ, ಪರಮಾತ್ಮನು ಸರ್ವದಾ ಯಜ್ಞದಲ್ಲಿ ಪ್ರತಿಷ್ಠಿತನಾಗಿದ್ದಾನೆ.

एवं प्रवर्तितं चक्रं

नानुवर्तयतीह यः।

अघायुरिन्द्रियारामो

मोघं पार्थ जीवति॥३.१६॥

ಏವಂ ಪ್ರವರ್ತಿತಂ ಚಕ್ರಂ

ನಾನುವರ್ತಯತೀಹ ಯಃ

ಅಘಾಯುರಿಂದ್ರಿಯಾರಾಮೋ

ಮೋಘಂ ಪಾರ್ಥ ಜೀವತಿ 3-16

 1.  O Arjuna,

This is the Cycle of Functions

Ordained by the Supreme Self.

He who does not conform to this Cycle

Is a sinner.

He remains attached to the senses,

Leading a futile life.

ಹೇ ಅರ್ಜುನಾ! ಯಾವ ಮನುಷ್ಯನು ಲೋಕದಲ್ಲಿ, ಪ್ರಕಾರವಾಗಿ ಪರಂಪರೆಯಿಂದ ಪ್ರಚಿಲಿತವಾಗಿರುವ ಭಗವಂತನ ಸೃಷ್ಟಿ ಚಕ್ರಕ್ಕೆ ಅನುಕುಲವಾಗಿ ವರ್ತಿಸುವುದಿಲ್ಲವೋ ಅರ್ಥಾತ್ ತನ್ನ ಕರ್ತವ್ಯಪಾಲನೆ ಮಾಡುವುದಿಲ್ಲವೋ, ಅವನು ಪಾಪಾತ್ಮನು. ಇಂದ್ರಿಯಗಳ ಮೂಲಕ ಭೋಗಗಳಲ್ಲಿ ರಮಿಸುವ ಪಾಪಾಯುವಾದ ಪುರುಷನ ಜೀವನ ವ್ಯರ್ಥವಾದುದು.

यस्त्वात्मरतिरेव स्यात्

आत्मतृप्तश्च मानवः।

आत्मन्येव सन्तुष्टः

तस्य कार्यं विद्यते॥३.१७॥

ಯಸ್ತ್ವಾತ್ಮರತಿರೇವ ಸ್ಯಾತ್

ಆತ್ಮತೃಪ್ತಶ್ಚ ಮಾನವಃ

ಆತ್ಮನ್ಯೇವ ಸಂತುಷ್ಟಃ

ತಸ್ಯ ಕಾರ್ಯಂ ವಿದ್ಯತೇ 3-17

 1.   But for him –

The man of self-knowledge –

Who gets delighted solely in the Self,

Who feels all the contentment in the Self,

Who gets satisfaction completely from the Self,

Such a one does not have any duty to perform.

ಆದರೆ ಯಾವ ಮನುಷ್ಯನು ಆತ್ಮನಲ್ಲಿಯೇ ಪ್ರೀತಿಯುಳ್ಳವನಾಗಿ ಸಂತೋಷವನ್ನು ಕಂಡುಕೊಳ್ಳುವನೋ, ಆತ್ಮನಲ್ಲಿಯೇ ತೃಪ್ತನಾಗಿರುವನೋ ಹಾಗೂ ಆತ್ಮನಲ್ಲಿಯೇ ಸಂತುಷ್ಟನಾಗಿರುವನೋ, ಅಂತಹ ಪುರುಷನಿಗೆ ಯಾವ ಕರ್ತವ್ಯವೂ ಇರುವುದಿಲ್ಲ.

नैव तस्य कृतेनार्थो

नाकृतेनेह कश्चन।

चास्य सर्वभूतेषु

कश्चिदर्थव्यपाश्रयः॥३.१८॥

ನೈವ ತಸ್ಯ ಕೃತೇನಾರ್ಥೋ

ನಾಕೃತೇನೇಹ ಕಶ್ಚನ

ಚಾಸ್ಯ ಸರ್ವಭೂತೇಷು

ಕಶ್ಚಿದರ್ಥವ್ಯಪಾಶ್ರಯಃ 3-18

 1.   For the Knower of the Self

There is no benefit from doing work

Or not doing any work,

Nor does he depend on anyone

To gain any benefit.

ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಿದವನಿಗೆ ನಿಯಮಿತ ಕರ್ಮಗಳ ಅನುಷ್ಠಾನದಿಂದ ಯಾವುದೇ ಪ್ರಯೋಜನವೂ ಇರುವುದಿಲ್ಲ. ಕರ್ಮಗಳನ್ನು ಮಾಡದಿರವುದರಿಂದಲೂ ಯಾವುದೇ ಅನರ್ಥವೂ ಇರುವುದಿಲ್ಲ, ಮತ್ತು ಯಾವುದೇ ಲಾಭವನ್ನು ಹೊಂದಲು ಅವನು ಯಾವುದರ ಮೇಲೂ ಆಧಾರಪಡಬೇಕಾದದ್ದಿಲ್ಲ.

तस्मादसक्तः सततं

कार्यं कर्म समाचर।

असक्तो ह्याचरन्कर्म

परमाप्नोति पूरुषः॥३.१९॥

ತಸ್ಮಾದಸಕ್ತಃ ಸತತಂ

ಕಾರ್ಯಂ ಕರ್ಮ ಸಮಾಚರ

ಅಸಕ್ತೋ ಹ್ಯಾಚರನ್ಕರ್ಮ

ಪರಮಾಪ್ನೋತಿ ಪೂರುಷಃ 3-19

 1.   Therefore be unattached

And do the work

That is required to be done.

Doing so without attachment to it,

You will attain Liberation.

ಆದುದರಿಂದ, ನಿರ್ಲಿಪ್ತನಾಗಿದ್ದುಕೊಂಡು ಫಲಾಸಕ್ತಿಯನ್ನು ಬಿಟ್ಟು ನಿರಂತರವೂ ಮಾಡಬೇಕಾದ ಕರ್ಮವನ್ನು ಮಾಡು. ಆಸಕ್ತಿಯಿಲ್ಲದ ನಿರ್ಲಿಪ್ತತೆಯಿಂದ ಕರ್ಮವನ್ನು ಮಾಡಿದಲ್ಲಿ ನೀನು ಮೋಕ್ಷವನ್ನು ಹೊಂದುವೆ.

कर्मणैव हि  संसिद्धिं

आस्थिता जनकादयः।

लोकसङ्ग्रहमेवापि

सम्पस्यन्कर्तुमर्हसि॥३.२०॥

ಕರ್ಮಣೈವ ಹಿ ಸಂಸಿದ್ಧಿಂ

ಆಸ್ಥಿತಾ ಜನಕಾದಯಃ

ಲೋಕಸಂಗ್ರಹಮೇವಾಪಿ

ಸಂಪಶ್ಯನ್ಕರ್ತುಮರ್ಹಸಿ 3-20

 1.  It is only by doing work unattached

That King Janaka and others

Attained Liberation.

You are required to do such work

As promotes well-being of everyone.

ಜನಕರಾಜನೇ ಮೊದಲಾದವರು, ಆಸಕ್ತಿರಹಿತ ನಿಯಮಿತ ಕರ್ಮಗಳನ್ನು ಮಾಡುವುದರಿಂದಲೇ ಮೋಕ್ಷವನ್ನೂ, ಸಿದ್ಧಿಯನ್ನೂ, ಪಡೆದುಕೊಂಡರು. ಆದುದರಿಂದ ಲೋಕಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೀನು ನಿನ್ನ ಕರ್ಮವನ್ನು ಮಾಡುವುದಕ್ಕೆ ಯೋಗ್ಯನಾಗಿದ್ದೀಯೆ.

यद्यदाचरति श्रेष्ठ:

तत्तदेवेतरो जनः।

यत्प्रमाणं कुरुते

लोकस्तदनुवर्तते॥३.२१॥

ಯದ್ಯದಾಚರತಿ ಶ್ರೇಷ್ಠಃ

ತತ್ತದೇವೇತರೋ ಜನಃ

ಯತ್ಪ್ರಮಾಣಂ ಕುರುತೇ

ಲೋಕಸ್ತದನುವರ್ತತೇ 3-21

 1.   Whatever a noble person does,

The common man follows suit.

He becomes a role model

For others to imitate.

ಶ್ರೇಷ್ಠನಾದ ಪುರುಷನು ಏನನ್ನು ಆಚರಿಸಿ ಕಾರ್ಯ ಮಾಡುತ್ತಾನೆಯೋ, ಸಾಮಾನ್ಯ ಮನುಷ್ಯರು ಅವನನ್ನು ಅನುಸರಿಸುತ್ತಾರೆ. ಆತನು ಇತರರಿಗೆ ಅನುಕರಣೀಯ, ಆದರ್ಶಪ್ರಾಯನಾಗಿರುತ್ತಾನೆ.

मे पार्थास्ति कर्तव्यं

त्रिषु लोकेषु किञ्चन।

नानवाप्तमवाप्तव्यं

वर्त एव कर्मणि॥३.२२॥

ಮೇ ಪಾರ್ಥಾಸ್ತಿ ಕರ್ತವ್ಯಂ

ತ್ರಿಷು ಲೋಕೇಷು ಕಿಂಚನ

ನಾನವಾಪ್ತಮವಾಪ್ತವ್ಯಂ

ವರ್ತ ಏವ ಕರ್ಮಣಿ 3-22

 1.   O Arjuna,

In all the three worlds,

I do not have any duty to perform.

There is nothing that I have failed to perform

Or remains yet to be fulfilled.

Yet I always keep myself engaged in action.

ಹೇ ಅರ್ಜುನಾ! ಮೂರು ಲೋಕಗಳಲ್ಲಿಯೂ ನನಗೆ ನಿಯತವಾದ ಯಾವುದೇ ಆಚರಿಸತಕ್ಕ ಕಾರ್ಯವಿಲ್ಲ. ನಾನು ಮಾಡದೇ ವಿಫಲವಾದ ಯಾವುದೇ ಕಾರ್ಯವಿಲ್ಲ, ಹಾಗೂ ಸಂಪೂರ್ಣವಾಗದೇ ಉಳಿದಿರತಕ್ಕಂತಹ ಕಾರ್ಯವಿಲ್ಲ. ಅಂದರೆ ನಾನು ಬಯಸುವ ವಸ್ತು ಯಾವುದೂ ಇಲ್ಲ ಮತ್ತು ನಾನು ಪಡೆಯಬೇಕಾದದ್ದು ಏನೂ ಇಲ್ಲ. ಆದರೂ ನಾನು ಸದಾ ನನ್ನನ್ನು ನಿಯಮಿತ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುತ್ತೇನೆ.

यदि ह्यहं वर्तेयं

जातु कर्मण्यतन्द्रितः।

मम वर्त्मानुवर्तन्ते

मनुष्याः पार्थ सर्वशः॥३.२३॥

ಯದಿ ಹ್ಯಹಂ ವರ್ತೇಯಂ

ಜಾತು ಕರ್ಮಣ್ಯತಂದ್ರಿತಃ

ಮಮ ವರ್ತ್ಮಾನುವರ್ತಂತೇ

ಮನುಷ್ಯಾಃ ಪಾರ್ಥ ಸರ್ವಶಃ 3-23

 1.  Out of negligence or indifference,

If ever I do not engage myself in action,

O Arjuna, people will follow my example

In every possible way.

ಎಲೈ ಅರ್ಜುನಾ! ಅಜಾಕರೂಕತೆಯಿಂದಾಗಲೀ ಅಥವಾ ಉಪೇಕ್ಷೆಯಿಂದಾಗಲೀ, ನಾನೆಂದಾದರೂ ನನ್ನನ್ನು ಕರ್ಮದಲ್ಲಿ ತೊಡಗಿಸಿಕೊಳ್ಳದೇ ಹೋದಲ್ಲಿ, ಮನುಷ್ಯರು ನನ್ನ ಮಾರ್ಗವನ್ನು ಸರ್ವಪ್ರಕಾರಗಳಿಂದಲೂ ಅನುಸರಿಸುವರು.

उत्सीदेयुरिमे लोका:

कुर्यां कर्म चेदहम्।

सङ्करस्य कर्तास्यां

उपहन्यामिमाः प्रजाः॥३.२४॥

ಉತ್ಸೀದೇಯುರಿಮೇ ಲೋಕಾಃ

ಕುರ್ಯಾಂ ಕರ್ಮ ಚೇದಹಮ್

ಸಂಕರಸ್ಯ ಕರ್ತಾಸ್ಯಾಂ

ಉಪಹನ್ಯಾಮಿಮಾಃ ಪ್ರಜಾಃ 3-24

 1.   If I do not act as I should,

All the worlds will collapse

And I will be causing varnasankara

With terrible mix up of traditions and practices;

Thereby people will go to ruin.

ನಾನು ನಿಯಮಿತ ಕರ್ಮವನ್ನು ಮಾಡದಿದ್ದರೆ ಲೋಕಗಳೆಲ್ಲಾ ನಾಶವಾಗುವುವು, ಮತ್ತು ನಾನು ವರ್ಣ ಸಂಕರಕ್ಕೆ ಕಾರಣೀಭೂತನಾಗುತ್ತೇನೆ. ಸಂಪ್ರದಾಯ ಮತ್ತು ಆಚರಣೆಗಳ ಭಯಂಕರ ಸಂಕರದಿಂದ, ಸಮಸ್ತ ಪ್ರಜೆಗಳ ದುರ್ಗತಿಗೂ ನಾನೇ ಕಾರಣನಾಗುತ್ತೇನೆ.

उत्सीदेयुरिमे लोका:

कुर्यां कर्म चेदहम्।

सङ्करस्य कर्तास्यां

उपहन्यामिमाः प्रजाः॥३.२४॥

ಉತ್ಸೀದೇಯುರಿಮೇ ಲೋಕಾಃ

ಕುರ್ಯಾಂ ಕರ್ಮ ಚೇದಹಮ್

ಸಂಕರಸ್ಯ ಕರ್ತಾಸ್ಯಾಂ

ಉಪಹನ್ಯಾಮಿಮಾಃ ಪ್ರಜಾಃ 3-24

 1.   If I do not act as I should,

All the worlds will collapse

And I will be causing varnasankara

With terrible mix up of traditions and practices;

Thereby people will go to ruin.

ನಾನು ನಿಯಮಿತ ಕರ್ಮವನ್ನು ಮಾಡದಿದ್ದರೆ ಲೋಕಗಳೆಲ್ಲಾ ನಾಶವಾಗುವುವು, ಮತ್ತು ನಾನು ವರ್ಣ ಸಂಕರಕ್ಕೆ ಕಾರಣೀಭೂತನಾಗುತ್ತೇನೆ. ಸಂಪ್ರದಾಯ ಮತ್ತು ಆಚರಣೆಗಳ ಭಯಂಕರ ಸಂಕರದಿಂದ, ಸಮಸ್ತ ಪ್ರಜೆಗಳ ದುರ್ಗತಿಗೂ ನಾನೇ ಕಾರಣನಾಗುತ್ತೇನೆ.

सक्ताः कर्मण्यविद्वांसो

यथा कुर्वन्ति भारत।

कुर्याद्विद्वांस्तथासक्त:

चिकीर्षुर्लोकसङ्ग्रहम्॥३.२५॥

ಸಕ್ತಾಃ ಕರ್ಮಣ್ಯವಿದ್ವಾಂಸೋ

ಯಥಾ ಕುರ್ವಂತಿ ಭಾರತ

ಕುರ್ಯಾದ್ವಿದ್ವಾಂಸ್ತಥಾಸಕ್ತಃ

ಚಿಕೀರ್ಷುರ್ಲೋಕಸಂಗ್ರಹಮ್ 3-25

 1.   O Arjuna,

Ignorant people perform their actions

Getting attached to what they do,

Whereas learned people perform their actions

Without getting attached to what they do.

They thus set an example

For the world to follow.

ಹೇ ಅರ್ಜುನಾ! ತಾವು ಮಾಡುವ ಕಾರ್ಯಗಳಿಗೆ ವಶರಾಗಿ ಅಜ್ಞಾನಿಗಳು ಹೇಗೆ ತಮ್ಮ ಕರ್ಮಗಳನ್ನು ಆಚರಿಸುತ್ತಾರೆಯೋ, ಹಾಗೆಯೇ ಜ್ಞಾನಿಗಳು ತಾವು ಮಾಡುವ ಕಾರ್ಯಗಳಿಗೆ ವಶರಾಗದೇ ತಮ್ಮ ಕರ್ಮಗಳಲ್ಲಿ ತೊಡಗುತ್ತಾರೆ. ಅಂದರೆ ಮಮಕಾರಬದ್ಧರಾದ ಪಾಮರರು ಕರ್ಮವನ್ನು ಫಲಾಸಕ್ತಿಯಿಂದ ಮಾಡುವಂತೆ, ಫಲಾಸಕ್ತಿಯಿಲ್ಲದ ಪಂಡಿತರು ಸದಾ ಲೋಕಹಿತವನ್ನು ಕೋರಿ ಕರ್ತವ್ಯ ಕರ್ಮವನ್ನು ಶ್ರದ್ಧೆಯಿಂದ ಮಾಡಿ, ಜಗತ್ತಿಗೆ ಮಾದರಿಯಾಗಬೇಕು.

बुद्धिभेदं जनयेत

अज्ञानां कर्मसङ्गिनाम्।

जोषयेत्सर्वकर्माणि

विद्वान्युक्तः समाचरन्॥३.२६॥

ಬುದ್ಧಿಭೇದಂ ಜನಯೇತ್

ಅಜ್ಞಾನಾಂ ಕರ್ಮಸಂಗಿನಾಮ್

ಜೋಷಯೇತ್ಸರ್ವಕರ್ಮಾಣಿ

ವಿದ್ವಾನ್ಯುಕ್ತಃ ಸಮಾಚರನ್ 3-26

 1.   The ignorant man acts with the conviction-

“I must do this work and enjoy its fruits”-

The learned man should not disturb

This conviction and cause confusion,

Which may result in non-action.

On the other hand, he should induce them

To continue to do the work

With the hope of getting the desired results.

ನಾನು ಕರ್ಮವನ್ನು ಆಚರಿಸಿ ಅದರ ಫಲವನ್ನುಅನುಭವಿಸಬೇಕುಎಂಬುದು ಪಾಮರರ ಗಟ್ಟಿ ನಿರ್ಧಾರವಾಗಿರುತ್ತದೆ. ಕರ್ಮದಲ್ಲಿ ಅಭಿರುಚಿಯಿರುವ ಪಾಮರ ಜನರ ಬುದ್ಧಿಗೆ ಪಂಡಿತನು ಭೇದವನ್ನು ಮತ್ತು ಗೊಂದಲವನ್ನು ಉಂಟುಮಾಡಬಾರದು. ಅರ್ಥಾತ್ ಕರ್ಮಗಳಲ್ಲಿ ಅಶ್ರದ್ಧೆಯನ್ನು ಉಂಟುಮಾಡಬಾರದು. ಏಕೆಂದರೆ ಅದು ಅವರಲ್ಲಿ ಕರ್ಮಾಸಕ್ತಿಯನ್ನು ಕುಂದಿಸಬಹುದು. ಹಾಗಾಗಿ ಜ್ಞಾನಿಯು ಸ್ವಯಂ ಶಾಸ್ತ್ರವಿಹಿತ ಸಮಸ್ತ ಕರ್ಮಗಳನ್ನು ಚೆನ್ನಾಗಿ ಆಚರಿಸುತ್ತಾ ಅವರಿಂದಲೂ ಸರ್ವ ಕರ್ಮಗಳನ್ನು ಮಾಡಿಸಬೇಕು.;

प्रकृतेः क्रियमाणानि

गुणैः कर्माणि सर्वशः।

अहङ्कारविमूढात्मा

कर्ताहमिति मन्यते॥३.२७॥

ಪ್ರಕೃತೇಃ ಕ್ರಿಯಮಾಣಾನಿ

ಗುಣೈಃ ಕರ್ಮಾಣಿ ಸರ್ವಶಃ

ಅಹಂಕಾರವಿಮೂಢಾತ್ಮಾ

ಕರ್ತಾಹಮಿತಿ ಮನ್ಯತೇ 3-27

 1.   All actions are being performed

In different ways by the Gunas,

The constituents of Prakriti:

Sattva, Rajas and Tamas.

A person who is deluded by the ego,-

The ‘I and Mine’,-

Thinks he is the doer of actions.

ವಾಸ್ತವವಾಗಿ ಸಮಸ್ತ ಕರ್ಮಗಳು ಎಲ್ಲ ಪ್ರಕಾರದಿಂದಲೂ ಪ್ರಕೃತಿಯಲ್ಲಿನ ತ್ರಿಗುಣಗಳಾದ ಸತ್ವ, ರಜಸ್ಸು ಮತ್ತು ತಮೋಗುಣಗಳ ಮೂಲಕವೇ ಮಾಡಲ್ಪಡುತ್ತವೆ. ಆದರೂ ಕೂಡ ಯಾರ ಅಂತಃಕರಣವು ಅಹಂಕಾರದಿಂದ ಮೋಹಿತವಾಗಿದೆಯೋ ಅಂತಹ ಅಜ್ಞಾನಿಯು ನಾನು ಕರ್ತೃವಾಗಿದ್ದೇನೆ ಎಂದು ತಿಳಿಯುತ್ತಾನೆ.

तत्ववित्तु महाबाहो

गुणकर्मविभागयोः।

गुणा गुणेषु वर्तन्ते

इति मत्वा सज्जते॥३.२८॥

ತತ್ತ್ವವಿತ್ತು ಮಹಾಬಾಹೋ

ಗುಣಕರ್ಮವಿಭಾಗಯೋಃ

ಗುಣಾ ಗುಣೇಷು ವರ್ತಂತೆ

ಇತಿ ಮತ್ವಾ ಸಜ್ಜತೇ 3-28

 1.   But, O Arjuna,

One who has the knowledge of the Gunas

And their operations among themselves

As actions —

Such a one does not develop attachment towards actions.

ಆದರೆ ಎಲೈ ಅರ್ಜುನ, ಗುಣವಿಭಾಗ ಮತ್ತು ಕರ್ಮವಿಭಾಗದ ತತ್ವವನ್ನು ಬಲ್ಲ ಜ್ಞಾನಯೋಗಿಯು ಗುಣಕಾರ್ಯಗಳಾದ ಇಂದ್ರಿಯಗಳು ಗುಣಕಾರ್ಯಗಳೇ ಆದ ವಿಷಯಗಳಲ್ಲಿ ಪ್ರವರ್ತಿಸುತ್ತವೆ ಎಂದು ತಿಳಿದು ಅವುಗಳಲ್ಲಿ ಆಸಕ್ತನಾಗುವುದಿಲ್ಲ.

प्रकृतेर्गुणसम्मूढाः

सज्जन्ते गुणकर्मसु।

तानकृत्स्नविदो मन्दान

कृत्स्नविन्न विचालयेत्॥३.२९॥

ಪ್ರಕೃತೇರ್ಗುಣಸಮ್ಮೂಢಾಃ

ಸಜ್ಜಂತೇ ಗುಣಕರ್ಮಸು

ತಾನಕೃತ್ಸ್ನವಿದೋ ಮಂದಾನ್

ಕೃತ್ಸ್ನವಿನ್ನ ವಿಚಾಲಯೇತ್ 3-29

 1.   Those who are deluded by Prakriti

And its constituents, the Gunas,

Sattva, Rajas and Tamas,

Get attached to various actions

Resulting  from the Gunas.

One who has the true Knowledge of Self

Should not destabilize and confuse

Those people who are devoid of True Knowlede.

ಪ್ರಕೃತಿ ಮತ್ತು ಅದರ ಅಂಗಗಳಾದ ಸತ್ವ, ರಜಸ್ಸು ಮತ್ತು ತಮೋಗುಣಗಳಿಂದ ಭ್ರಮೆ ಹೊಂದಿದವರು, ಗುಣಕರ್ಮಗಳಲ್ಲಿ ಆಸಕ್ತರಾಗುವರು. ಪೂರ್ಣ ಜ್ಞಾನಿಯಾದವನು ಅಲ್ಪಜ್ಞರಾದ, ಮಂದಬುದ್ಧಿಯುಳ್ಳ ಅಜ್ಞಾನಿಗಳನ್ನು ಅವರ ದಾರಿಯಿಂದ ಕದಲಿಸಿ ವಿಚಲಿತಗೊಳಿಸಬಾರದು.

मयि सर्वाणि कर्माणि

सन्यस्याध्यात्मचेतसा।

निराशीर्निर्ममो भूत्वा

युध्यस्व विगतज्वरः॥३.३०॥

ಮಯಿ ಸರ್ವಾಣಿ ಕರ್ಮಾಣಿ

ಸಂನ್ಯಸ್ಯಾಧ್ಯಾತ್ಮಚೇತಸಾ

ನಿರಾಶೀರ್ನಿರ್ಮಮೋ ಭೂತ್ವಾ

ಯುಧ್ಯಸ್ವ ವಿಗತಜ್ವರಃ 3-30

 1.   Make an offering of all your actions

To Me, with discriminating intellect,

Without craving, without attachment,

And without any concern or worry.

Arjuna, go and fight.

ಆತ್ಮ ನಿಷ್ಠವಾದ ಬುದ್ಧಿಯಿಂದ ಸಮಸ್ತ ಕರ್ಮಗಳನ್ನೂ ನನ್ನಲ್ಲಿ ಸಮರ್ಪಿಸಿ, ಆಸೆಯಿಲ್ಲದವನಾಗಿ, ಮಮಕಾರವಿಲ್ಲದವನಾಗಿ, ಮನಸ್ಸಿನಲ್ಲಿ ತಳಮಳವಿಲ್ಲದೆ ಯುದ್ಧ ಮಾಡು ಅರ್ಜುನಾ!

ये मे मतमिदं नित्यम

अनुतिष्ठन्ति मानवाः।

श्रद्धावन्तोऽनसूयन्तो

मुच्यन्ते तेऽपि कर्मभिः॥३.३१॥

ಯೇ ಮೇ ಮತಮಿದಂ ನಿತ್ಯಂ

ಅನುತಿಷ್ಠಂತಿ ಮಾನವಾಃ

ಶ್ರದ್ಧಾವಂತೋಽನಸೂಯಂತೋ

ಮುಚ್ಯಂತೇ ತೇಽಪಿ ಕರ್ಮಭಿಃ 3-31

 1.   Those who accept and act

According to this Doctrine of mine –

The Theory of Karma, as stated above,

And remain dedicated without any trace of envy,

Get liberated from the binding

Caused by attachment to action

as the doer of action.

ಯಾರು ನನ್ನ ಮತವಾದ ಕರ್ಮಸಿದ್ಧಾಂತವನ್ನು ಒಪ್ಪಿಕೊಂಡು, ಮಾತ್ಸರ್ಯವಿಲ್ಲದವರಾಗಿ, ಶ್ರದ್ಧಾವಂತರಾಗಿ, ಸದಾ ಅನುಸರಣೆ ಮತ್ತು ಅನುಷ್ಠಾನವನ್ನು ಮಾಡುತ್ತಾರೆಯೋ ಅವರು ಕರ್ಮಬಂಧನದಿಂದ ವಿಮುಕ್ತಿಯನ್ನು ಪಡೆಯುತ್ತಾರೆ.

ये त्वेतदभ्यसूयन्तो

नानुतिष्ठन्ति मे मतम्।

सर्वज्ञानविमूढान्स्तान्

विद्धि नष्टानचेतसः॥३.३२॥

ಯೇ ತ್ವೇತದಭ್ಯಸೂಯಂತೋ

ನಾನುತಿಷ್ಠಂತಿ ಮೇ ಮತಮ್

ಸರ್ವಜ್ಞಾನವಿಮೂಢಾಂಸ್ತಾನ್

ವಿದ್ಧಿ ನಷ್ಟಾನಚೇತಸಃ 3-32

 1.   Those who reject, condemn and refuse

To conform to my Doctrine

Are bereft of any jnana or knowledge.

They get ruined by their ignorance,

Fail to discriminate between the Real and the Unreal

And get totally lost.

ಆದರೆ ಯಾರು ಅಸೂಯಾಪರರಾಗಿ ನನ್ನಲ್ಲಿ ದೋಷಾರೋಪಣೆ ಮಾಡುತ್ತಾ ನನ್ನ ಸಿದ್ಧಾಂತಕ್ಕನುಸಾರವಾಗಿ ನಡೆಯುವುದಿಲ್ಲವೋ, ನಂಬುವುದಿಲ್ಲವೋ ಮತ್ತು ಇದನ್ನು ತಿರಸ್ಕರಿಸುವರೋ, ಅವರನ್ನು ಸರ್ವಜ್ಞಾನ ವಿಮೂಢರೆಂದೂ, ಹಾಳಾದವರೆಂದೂ, ಬುದ್ಧಿಯಿಲ್ಲದವರೆಂದೂ ತಿಳಿ.

सदृशं चेष्टते स्वस्याः

प्रकृतेर्ज्ञानवानपि।

प्रकृतिं यान्ति भूतानि

निग्रहः किं करिष्यति?॥३.३३॥

 

ಸದೃಶಂ ಚೇಷ್ಟತೇ ಸ್ವಸ್ಯಾಃ

ಪ್ರಕೃತೇರ್ಜ್ಞಾನವಾನಪಿ

ಪ್ರಕೃತಿಂ ಯಾಂತಿ ಭೂತಾನಿ

ನಿಗ್ರಹಃ ಕಿಂ ಕರಿಷ್ಯತಿ 3-33

 1.   Even a gnani,

Behaves according to his own nature,

That is as directed by his vasanas.

So is the case with all living beings.

Of what use is an attempt to control

Or repress the promptings of one’s own nature?

ಸಮಸ್ತ ಪ್ರಾಣಿಗಳು ತಮ್ಮ ತಮ್ಮ ಪ್ರಕೃತಿಗೆ ಅನುಗುಣವಾಗಿ, ತಮ್ಮ ಸ್ವಭಾವಕ್ಕೆ ಪರವಶವಾಗಿ ಕರ್ಮ ಮಾಡುತ್ತವೆ. ಜ್ಞಾನಿಯೂ ಸಹ ತನ್ನ ವಾಸನೆಗಳಿಂದ ನಿರ್ದೇಶಿಸಲ್ಪಟ್ಟವನಾಗಿ ತನ್ನ ಪ್ರಕೃತಿಗೆ ಅನುಸಾರವಾಗಿ ಕ್ರಿಯೆಗಳನ್ನು ಮಾಡುತ್ತಾನೆ. ಹೀಗಿರುವಾಗ ತನ್ನ ಪ್ರಕೃತಿಯ ಪ್ರೇರಣೆಯನ್ನು ನಿಯಂತ್ರಿಸುವುದರಿಂದಾಗಲೀ ನಿಗ್ರಹಿಸುವುದರಿಂದಾಗಲೀ ಪ್ರಯೋಜನವೇನು?

इन्द्रियस्येन्द्रियस्यार्थे

रागद्वेषौ व्यवस्थितौ।

तयोर्न वशमागच्छेत

तौह्यस्य परिपन्थिनः॥३.३४॥

ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ

ರಾಗದ್ವೇಷೌ ವ್ಯವಸ್ಥಿತೌ

ತಯೋರ್ನ ವಶಮಾಗಚ್ಛೇತ್

ತೌಹ್ಯಸ್ಯ ಪರಿಪಂಥಿನೌ 3-34

 1.   Each of the senses shows

A strong tendency towards its object

In terms of attachment and aversion –

Raga and dvesha.

One should not be influenced by them

As they are great obstacles

On the path of Knowledge.

ಇಂದ್ರಿಯಗಳು ಮತ್ತು ಅವುಗಳ ವಿಷಯಗಳಿಗೆ ಸಂಬಂಧಿಸಿದಂತೆ ರಾಗ ಮತ್ತು ದ್ವೇಷಗಳು ಅಡಗಿದ್ದು ಸ್ಥಿತವಾಗಿರುತ್ತವೆ. ಮನುಷ್ಯನು ಇಂತಹ ರಾಗದ್ವೇಷಗಳ ವಶನಾಗಬಾರದು. ಏಕೆಂದರೆ ಅವೆರಡೇ ಅವನ ಶ್ರೇಯಸ್ಸಿನ ಮಾರ್ಗದಲ್ಲಿ ವಿಘ್ನವನ್ನುಂಟುಮಾಡುವ ಮಹಾ ಶತ್ರುಗಳಾಗಿವೆ.

श्रेयान्स्वधर्मो विगुणः

परधर्मात्स्वनुष्ठितात्।

स्वधर्मे निधनं श्रेयः

परधर्मो भयावहः॥३.३५॥

ಶ್ರೇಯಾನ್ಸ್ವಧರ್ಮೋ ವಿಗುಣಃ

ಪರಧರ್ಮಾತ್ಸ್ವನುಷ್ಠಿತಾತ್

ಸ್ವಧರ್ಮೇ ನಿಧನಂ ಶ್ರೇಯಃ

ಪರಧರ್ಮೋ ಭಯಾವಹಃ 3-35

 1.   Svadharma

The Law of one’s own nature –

Though lacking in some merits,

Is superior to paradarma,

The Law of nature belonging to others –

However meritorious it might be.

While working out one’s svadharma,

Facing even death is better

Than adopting paradharma,

Which leaves fear in its wake.

ತನ್ನ ಸ್ವಂತ ಪ್ರಕೃತಿ ಅಥವಾ ಸ್ವಭಾವವನ್ನು ಪಾಲಿಸುವಂತಹಸ್ವಧರ್ಮವು ಗುಣರಹಿತವಾಗಿದ್ದರೂ ಸಹ ಒಳ್ಳೆಯ ಅಂಶಗಳಿಂದ ಕೂಡಿದ ಪರರ ಪ್ರಕೃತಿಯಾದಪರಧರ್ಮಕ್ಕಿಂತಲೂ ಉತ್ತಮವಾಗಿದೆ. ಭಯವನ್ನುಂಟುಮಾಡುವ ಭಯಂಕರ ಪರಧರ್ಮವನ್ನು ಆಚರಿಸುವುದಕ್ಕಿಂತಲೂ ಸ್ವಧರ್ಮವನ್ನು ಪಾಲಿಸುತ್ತಾ ಸಾವನ್ನು ಎದುರಿಸುವುದು ಒಳಿತು.

अर्जुन उवाच:

अथ केन प्रयुक्तोऽयं

पापं चरति पूरुषः।

अनिच्छन्नपि वार्ष्णेय

बलादिव नियोजितः॥३.३६॥

ಅರ್ಜುನ ಉವಾಚ

ಅಥ ಕೇನ ಪ್ರಯುಕ್ತೋಽಯಂ

ಪಾಪಂ ಚರತಿ ಪೂರುಷಃ

ಅನಿಚ್ಛನ್ನಪಿ ವಾರ್ಷ್ಣೇಯ

ಬಲಾದಿವ ನಿಯೋಜಿತಃ 3-36

 1.   Arjuna said:

O Krishna, tell me

What is it that induces a person

To commit sin, unwillingly though,

As if forcefully driven to it.

ಅರ್ಜುನ ಹೇಳಿದನು:

ಹೇ ಕೃಷ್ಣಾ! ತನಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಯಾವುದಕ್ಕೋ ಕಟ್ಟುಬಿದ್ದವನಂತೆ ಮನುಷ್ಯನು ಪಾಪವನ್ನು ಮಾಡುತ್ತಾನೆ. ಪ್ರಬಲ ಶಕ್ತಿಯು ಯಾವುದು.

श्रीभगवानुवाच:

काम एष क्रोध एष

रजोगुणसमुद्भवः।

महाशनो महापाप्मा

विद्ध्येनमिह वैरिणम्॥३.३७॥

ಶ್ರೀಭಗವಾನುವಾಚ

ಕಾಮ ಏಷ ಕ್ರೋಧ ಏಷ

ರಜೋಗುಣಸಮುದ್ಭವಃ

ಮಹಾಶನೋ ಮಹಾಪಾಪ್ಮಾ

ವಿದ್ಧ್ಯೇನಮಿಹ ವೈರಿಣಮ್ 3-37

 1.   Sri Bhagavan said:

It is kama, intense craving,

It is krodha, extreme anger, —

Craving when unfulfilled turns into anger –

Both caused by the quality of rajas –passion.

It is greedy and voracious.

Arjuna, know that it is a great sinner

And acts as an Enemy.

ಭಗವಂತನು ಹೇಳಿದನು:

ಅರ್ಜುನಾ, ರಜೋಗುಣದ ಸಂಪರ್ಕದಿಂದ ಹುಟ್ಟಿ ಅನಂತರ ಕ್ರೋಧವಾಗಿ ಮಾರ್ಪಡುವ ಕಾಮವೇ ಇದಕ್ಕೆ ಕಾರಣವಾಗುತ್ತದೆ. ಇದು ಸರ್ವಗ್ರಾಹಿ ಹೊಟ್ಟೆಬಾಕತನವುಳ್ಳದ್ದು. ಕಾಮವು ಅತ್ಯಾಸೆಯುಳ್ಳದ್ದು. ಕಾಮವು ಎಲ್ಲವನ್ನೂ ನುಂಗಿಹಾಕುವ ಜಗತ್ತಿನ ಪಾಪಪೂರಿತ ಶತ್ರುವೆಂದು ತಿಳಿ.

धूमेनाव्रियते वह्नि:

यथादर्शो मलेन च।

यथोल्बेनावृतो गर्भ:

तथा तेनेदमवृतम्॥३.३८॥

ಧೂಮೇನಾವ್ರಿಯತೇ ವಹ್ನಿಃ

ಯಥಾದರ್ಶೋ ಮಲೇನ

ಯಥೋಲ್ಬೇನಾವೃತೋ ಗರ್ಭಃ

ತಥಾ ತೇನೇದಮಾವೃತಮ್ 3-38

 1.   Just as fire gets concealed by smoke,

A mirror by dirt, and embryo by the womb,

In the same way, knowledge gets enveloped

By kama and krodha, desire and anger.

ಯಾವ ಪ್ರಕಾರವಾಗಿ ಅಗ್ನಿಯನ್ನು ಹೊಗೆ ಆವರಿಸಿದಂತೆ, ಕನ್ನಡಿಯನ್ನು ಧೂಳು ಮುಸುಕಿದಂತೆ ಮತ್ತು ಗರ್ಭಕೋಶವು ಭ್ರೂಣವನ್ನು ಮುಚ್ಚುವಂತೆ ಅದೇ ಪ್ರಕಾರವಾಗಿ ಕಾಮ ಮತ್ತು ಕ್ರೋಧದ ಮೂಲಕ ಜ್ಞಾನವು ಮುಚ್ಚಲ್ಪಟ್ಟಿರುತ್ತದೆ.

आवृतं ज्ञानमेतेन

ज्ञानिनो नित्यवैरिणा।

कामरूपेण कौन्तेय

दुष्पूरेणानलेन च॥३.३९॥

ಆವೃತಂ ಜ್ಞಾನಮೇತೇನ

ಜ್ಞಾನಿನೋ ನಿತ್ಯವೈರಿಣಾ

ಕಾಮರೂಪೇಣ ಕೌಂತೇಯ

ದುಷ್ಪೂರೇಣಾನಲೇನ 3-39

 1.   The knower considers this kama

Along with krodha

To be his abiding enemy, clouding his knowledge.

O Arjuna, it is like fire burning incessantly.

ಕ್ರೋಧದಿಂದೊಡಗೂಡಿದ ಕಾಮವು ತನ್ನ ಜ್ಞಾನವನ್ನು ಮುಸುಕಿರುವ ಬದ್ಧವೈರಿಯೆಂದು ಪ್ರಾಜ್ಞರು ಭಾವಿಸುತ್ತಾರೆ. ಅರ್ಜುನಾ! ಕಾಮವು ಸದಾ ನಿಲ್ಲದ ಅಗ್ನಿಯಂತೆ ಉರಿಯುತ್ತಿರುತ್ತದೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ.

इन्द्रियाणि मनो बुद्धि:

अस्याधिष्ठानमुच्यते।

एतैर्विमोहयत्येष:

ज्ञानमावृत्य देहिनम्॥३.४०॥

ಇಂದ್ರಿಯಾಣಿ ಮನೋ ಬುದ್ಧಿಃ

ಅಸ್ಯಾಧಿಷ್ಠಾನಮುಚ್ಯತೇ

ಏತೈರ್ವಿಮೋಹಯತ್ಯೇಷಃ

ಜ್ಞಾನಮಾವೃತ್ಯ ದೇಹಿನಮ್ 3-40

 1.   It is said that

By making the senses,

The mind and the intellect, his abode,

This kama or craving, with their help,

Envelops the discriminating power

And causes delusion to the embodied self.

ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳು ಕಾಮಕ್ಕೆ ಆಶ್ರಯಸ್ಥಾನಗಳು. ಕಾಮವು ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೂಲಕವೇ ಜ್ಞಾನವನ್ನು ಆವರಿಸಿ, ಅದನ್ನು ಮುಚ್ಚಿ, ಜೀವಾತ್ಮನನ್ನು ಪರವಶವನ್ನಾಗಿಸಿ ದಿಕ್ಕುಗೆಡಿಸುತ್ತದೆ.

तस्मात्त्वं इंन्द्रियाण्यादौ

नियम्य भरतर्षभ।

पाप्मानं प्रजहि ह्येनं

ज्ञानविज्ञाननाशनम्॥३.४१॥

ತಸ್ಮಾತ್ತ್ವಂ ಇಂದ್ರಿಯಾಣ್ಯಾದೌ

ನಿಯಮ್ಯ ಭರತರ್ಷಭ

ಪಾಪ್ಮಾನಂ ಪ್ರಜಹಿ ಹ್ಯೇನಂ

ಜ್ಞಾನವಿಜ್ಞಾನನಾಶನಮ್ 3-41

 1.   Therefore, O Arjuna,

Bring your senses under control

And give up this sinful craving,

Which destroys knowledge and wisdom.

ಆದುದರಿಂದ ಎಲೈ ಅರ್ಜುನ, ನೀನು ಮೊದಲು ಇಂದ್ರಿಯಗಳನ್ನು ನಿಯಂತ್ರಿಸಿ ವಶಪಡಿಸಿಕೊಂಡು ಜ್ಞಾನ ಮತ್ತು ವಿವೇಕವನ್ನು ನಾಶಪಡುವ ಮಹಾಪಾಪಿಯಾದ ಕಾಮವನ್ನು ಅವಶ್ಯವಾಗಿ ಧ್ವಂಸಮಾಡು.

इन्द्रियाणि पराण्याहु:

इन्द्रियेभ्यः परं मनः।

मनसस्तु परा बुद्धि:

योर्बुद्धेः परतस्तु सः॥३.४२॥

ಇಂದ್ರಿಯಾಣಿ ಪರಾಣ್ಯಾಹುಃ

ಇಂದ್ರಿಯೇಭ್ಯಃ ಪರಂ ಮನಃ

ಮನಸಸ್ತು ಪರಾ ಬುದ್ಧಿಃ

ಯೋಬುದ್ಧೇಃ ಪರತಸ್ತು ಸಃ 3-42

 1.   It is said by the great sages

That, compared to the gross body,

The senses are more eminent;

Than the senses, the mind is more excellent;

Than the mind, the intellect is nobler;

Nobler still than the intellect is the Self,

The Beholder of All.

ಇಂದ್ರಿಯಗಳು ಸ್ಥೂಲಶರೀರಕ್ಕಿಂತ, ಶ್ರೇಷ್ಠ, ಬಲಶಾಲಿ ಮತ್ತು ಸೂಕ್ಷ್ಮ ಎಂದು ಪ್ರಾಜ್ಞರು ಹೇಳುತ್ತಾರೆ. ಇಂದ್ರಿಯಗಳಿಗಿಂತ ಶ್ರೇಷ್ಠವಾದದ್ದು ಮನಸ್ಸು. ಮನಸ್ಸಿಗಿಂತಲೂ ಶ್ರೇಷ್ಟವಾದುದು ಬುದ್ಧಿಯಾಗಿದೆ ಮತ್ತು ಯಾವುದು ಬುದ್ಧಿಗಿಂತಲೂ ಕೂಡ ಶ್ರೇಷ್ಠವಾಗಿದೆಯೋ ಅದೇ ಎಲ್ಲವನ್ನೂ ಒಳಗೊಂಡಂತಹ ಆತ್ಮವಾಗಿದೆ.

एवं बुद्धेः परं बुद्ध्वा

संस्तभ्यात्मानमात्मना।

जहि शत्रुं महाबाहो

कामरूपं दुरासदम्॥३.४३

ಏವಂ ಬುದ್ಧೇಃ ಪರಂ ಬುದ್ಧ್ವಾ

ಸಂಸ್ತಭ್ಯಾತ್ಮಾನಮಾತ್ಮನಾ

ಜಹಿ ಶತ್ರುಂ ಮಹಾಬಾಹೋ

ಕಾಮರೂಪಂ ದುರಾಸದಮ್ 3-43

 1.   O Arjuna,

Know that the Self is beyond the intellect.

Control your mind with purified intellect.

Then fight the foe in the form of kama or craving

And destroy that stubborn enemy.

ಅರ್ಜುನಾ! ಪ್ರಕಾರವಾಗಿ ಬುದ್ಧಿಗಿಂತ ಸೂಕ್ಷ್ಮವೂ, ಬಲಶಾಲಿಯೂ ಮತ್ತು ಅತ್ಯಂತ ಶ್ರೇಷ್ಠವಾದ ಆತ್ಮನನ್ನು ಅರಿತುಕೊಂಡು ಮನಸ್ಸನ್ನು ಉದ್ದೇಶಪೂರ್ವಕವಾದ ಅಲೌಕಿಕ ಬುದ್ಧಿಯಿಂದ ಧೃಢಗೊಳಿಸು. ನಂತರ ಆಧ್ಯಾತ್ಮಿಕ ಶಕ್ತಿಯಿಂದ ಎಂದೂ ತೃಪ್ತಿಪಡಿಸಲು ಸಾಧ್ಯವಿಲ್ಲದ ಕಾಮ ಎಂಬ ವೈರಿಯನ್ನು ನಾಶಮಾಡು.

ऒम् तत्सदिति

ಓಂ ತತ್ಸದಿತಿ

श्रीमद्भगवद्गितासू

ಶ್ರೀಮದ್ಭಗವದ್ಗೀತಾಸೂ

उपनिषत्सु

ಉಪನಿಷತ್ಸು

ब्रह्म विद्यायां

ಬ್ರಹ್ಮವಿದ್ಯಾಯಾಂ

यॊगशास्त्रॆ

ಯೋಗಶಾಸ್ತ್ರೇ

श्रीकृष्णार्जुनसंवादॆ

ಶ್ರೀಕೃಷ್ಣಾರ್ಜುನಸಂವಾದೇ

कर्मयोगो नाम

ಕರ್ಮಯೋಗೋ ನಾಮ

तृतीयोऽध्यायः

ತೃತೀಯೋಽಧ್ಯಾಯಃ 2

ऒं ततसत्

ಓಂ ತತ್ಸತು

ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಕರ್ಮಯೋಗವೆಂಬ ಹೆಸರಿನ ಮೂರನೆಯ ಅಧ್ಯಾಯವು ಮುಗಿದುದು.

To watch videos of Srimad Bhagavad Gita published by Lanka Krishna Murty Foundation press the following link
https://www.youtube.com/playlist…

To watch the videos of Vishnusahasranama published by Lanka Krishna Murti Foundation please press the following link 
Vishnusahasranama A Sloka A Day: 
https://www.youtube.com/playlist…

To watch the videos of A Subhasita A Day published by Lanka Krishna Murti Foundation please press the following link 
https://www.youtube.com/playlist…

To watch the website of Lanka Krishna Murti Foundation please press the following link 
https://www.krishnamurtifoundation.com/lanka/
L.Subramanya